ಮೇಷ ರಾಶಿ: ನಿಮ್ಮಲ್ಲಿರುವ ಜ್ಞಾನಸಂಪತ್ತನ್ನು ಪರರಿಗೆ ಧಾರೆ ಎರೆಯುವ ನಿಮ್ಮ ಕೌಶಲ್ಯವು ಸಮಾಜದಲ್ಲಿ ಮನ್ನಣೆ ಗಳಿಸುವುದು. ಈ ಮೂಲಕ ಹಣಕಾಸು ಕೂಡಾ ನಿಮಗೆ ಬರುವುದು. ಮನೆಯಲ್ಲಿ ಸಂತಸದ ವಾತಾವರಣ ಮೂಡುವುದು. ಕುಲ ದೇವರ ಪ್ರಾರ್ಥನೆ ಮಾಡಿ.
ವೃಷಭರಾಶಿ: ಯೋಚಿಸದೆ ಮಾತನಾಡಲು ಮುಂದಾಗದಿರಿ. ವಿರೋಧಿಗಳ ಟೀಕೆಗಳಿಗೆ ನೀವೇ ಅವಕಾಶ ಮಾಡಿಕೊಡದಿರಿ. ಅವಮಾನ ಪ್ರಸಂಗ ಎದುರಿಸುವ ಸಾಧ್ಯತೆ ಇದೆ. ವಿಷ್ಣುಸಹಸ್ರನಾಮ ಪಾರಾಯಣ ಮಾಡಿ.
ಮಿಥುನ ರಾಶಿ: ಯುದ್ಧಕ್ಕಿಂತ ಮುಂಚೆಯೇ ಸೋಲಲು ನಿರ್ಧರಿಸಬೇಡಿ. ಶಕ್ತಿ ಇರುವವರೆಗೂ ಹೋರಾಡಿ. ಭಗವಂತ ನಿಮಗೆ ಸಹಾಯ ಮಾಡುವನು. ಕೊನೆ ಹಂತದಲ್ಲಿ ನೀವೇ ಜಯಶಾಲಿಯಾಗುವಿರಿ. ನಿಮ್ಮ ವಿಜಯವು ವಿರೋಧಿಗಳಿಗೆ ನುಂಗಲಾರದ ಬಿಸಿ ತುಪ್ಪವಾಗುವುದು.
ಕಟಕ ರಾಶಿ: ಬೇಡದ ಒತ್ತಡಗಳನ್ನು ಎದುರಿಸಿ ದಣಿಯುವ ಪರಿಸ್ಥಿತಿಗೆ ತುತ್ತಾಗುವ ಸಾಧ್ಯತೆಗಳು ಅಧಿಕ. ಎಚ್ಚರದಿಂದ ಇರಿ. ಮಡದಿಯ ಸಕಾಲಿಕ ಎಚ್ಚರಿಕೆಯ ಮಾತುಗಳನ್ನು ಆಲಿಸುವುದು ಒಳ್ಳೆಯದು. ಅವಶ್ಯಕತೆಗೆ ತಕ್ಕಷ್ಟು ಹಣ ಖರ್ಚು ಮಾಡುವುದು ಉತ್ತಮ.
ಸಿಂಹ ರಾಶಿ: ಸಾಮಾಜಿಕ ವಲಯದಲ್ಲಿ ನಿಮಗೆ ವಿಶೇಷವಾದ ಜವಾಬ್ದಾರಿಯು ಬರಲು ವರ್ತಮಾನವು ಸಹಕರಿಸುವುದು. ನಿಮ್ಮಿಂದ ದೂರವಾಗಿದ್ದ ಸ್ನೇಹಿತರು, ಬಂಧುಗಳು ನಿಮ್ಮ ಸಹಾಯಹಸ್ತ ಕೇಳಿಬರುವರು.
ಕನ್ಯಾ ರಾಶಿ: ಗುರಿ ತಲುಪಲು ಬೇಕಾದ ಅವಕಾಶ ಜಾಸ್ತಿಯೇ ಇದೆಯಾದರೂ ದುಡುಕಿನ ಮಾತುಗಳು ಇದಕ್ಕೆ ತೊಂದರೆ ತರುವ ಸಾಧ್ಯತೆ ಇದೆ. ನಿಮ್ಮ ಪಾಂಡಿತ್ಯ ಮತ್ತು ನೀವು ಇರುವ ಸ್ಥಾನಮಾನವನ್ನು ಅರಿತು ತೂಕಬದ್ಧವಾದ ಮಾತನ್ನು ಆಡುವುದು ಒಳ್ಳೆಯದು.
ತುಲಾ ರಾಶಿ: ತುರ್ತು ಅವಶ್ಯಕತೆಯ ಕಾರಣದಿಂದ ಬೇಡವಾಗಿರುವ ಪ್ರವಾಸ ಒಂದನ್ನು ಕೈಗೊಳ್ಳಬೇಕಾಗಿ ಬರುವ ಸಾಧ್ಯತೆ ಇದೆ. ಆದಷ್ಟು ಪ್ರಯಾಣದಲ್ಲಿ ಎಚ್ಚರಿಕೆ ಇರಲಿ. ಹಿರಿಯರ ಆಶೀರ್ವಾದ ಪಡೆದು ಪ್ರಯಾಣ ಮಾಡಿ.
ವೃಶ್ಚಿಕ ರಾಶಿ: ನಿಮ್ಮ ಆಸಕ್ತಿಯ ವಿಷಯದ ವಿಸ್ತಾರ ಕಗ್ಗಂಟಾಗುವಂತೆ ಹತ್ತಿರದವರು ಪ್ರಯತ್ನ ಮಾಡುವ ಸಾಧ್ಯತೆ ಇದೆ. ಮಾತಾ ದುರ್ಗಾದೇವಿಯನ್ನು ಆರಾಧನೆ ಮಾಡುವುದು ಒಳ್ಳೆಯದು. 250 ಗ್ರಾಂ ಉದ್ದಿನಕಾಳನ್ನು ದಾನಮಾಡಿ.
ಧನುಸ್ಸು ರಾಶಿ: ಎಚ್ಚರಿಕೆ ಇರಲಿ. ಹಳೆಯ ವಿಷಯವನ್ನು ಕೆದಕಿ ನಿಮ್ಮನ್ನು ನಗೆಪಾಟಲಿಗೆ ಈಡು ಮಾಡುವ ಸಾಧ್ಯತೆಗಳು ಇವೆ. ಹಾಗಾಗಿ ಮಾತನಾಡುವಾಗ ಎರಡು ಬಾರಿ ಚಿಂತಿಸಿ ಮಾತನಾಡಿ. ಮಕ್ಕಳ ವಿಷಯದಲ್ಲಿ ಅತಿಯಾದ ವಿಶ್ವಾಸ ಇಡುವುದು ಬೇಡ.
ಮಕರ ರಾಶಿ: ಬಹಳಷ್ಟು ಉನ್ನತ ಸ್ಥಾನವನ್ನು ಅಲಂಕರಿಸುವ ಯೋಗ ಬರುವ ಸಾಧ್ಯತೆ ಇದೆ. ವರ್ತಮಾನದ ದಿನಗಳು ನಿಮಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವವು. ವಿವಿಧ ಮೂಲಗಳಿಂದ ಹಣ ಬರುವುದು.
ಕುಂಭ ರಾಶಿ: ಮಾತುಗಳನ್ನು ಆಡಿ. ಆದರೆ ಒಣ ಚರ್ಚೆ, ವಿರಸ, ಮುನಿಸುಗಳು ಬೆಳೆಯದಂತೆ ನಿಗಾ ವಹಿಸಿ. ಕೆಲವು ವ್ಯತಿರಿಕ್ತ ಶಕ್ತಿಗಳು ನಿಮ್ಮ ವಿರುದ್ಧವಾಗಿವೆ. ಆದರೆ ಸಕಾರಾತ್ಮಕ ಧೋರಣೆಯನ್ನು ಮಾತ್ರ ಬಿಡದಿರಿ.
ಮಿನ ರಾಶಿ: ನಿಮ್ಮದು ಸತ್ಯ ಹಾಗೂ ಧರ್ಮದ ದಾರಿಯಾಗಿದೆ. ಹಾಗಾಗಿ ನಿಮ್ಮ ಯಶಸ್ಸು ಮಂದಗತಿಯಾದರೂ ನಿಖರವಾದ ಪ್ರಯೋಜನವನ್ನು ಹೊಂದುವಿರಿ. ಅಲ್ಲಿಯವರೆಗೆ ತಾಳ್ಮೆಯಿಂದ ಇರಿ. ಮನೆಯಲ್ಲಿಒಮ್ಮತದ ಅಭಿಪ್ರಾಯ ಮೂಡಿ ಬರಲಿದೆ. . ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.