20-09-2020 – My Acharya
Dina Bhavishyaಜ್ಯೋತಿಷ್ಯ ತರಗತಿಪರಿಹಾರಗಳು

20-09-2020

ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.
This image has an empty alt attribute; its file name is 1.Arise-Horoscope-1024x1019.png
ಮೇಷ ರಾಶಿ: ಮಾತಿನಲ್ಲಿ ಚತುರತೆ ಇರುವ ನೀವು ಎಲ್ಲರನ್ನು ಮೋಡಿಮಾಡುವಿರಿ. ಮನೆಯಲ್ಲಿ ಪತ್ನಿಯೊಂದಿಗೆ ಮುನಿಸು ಹಾಗೂ ಕೋಪತಾಪಗಳಿರಲಿವೆ. ವೃತ್ತಿರಂಗದಲ್ಲಿ ಬಡ್ತಿಯ ಯೋಗವಿದೆ. ವ್ಯಾಪಾರಿಗಳಿಗೆ ಉತ್ತಮ ಲಾಭವಿದೆ. ಕುಟುಂಬದ ವಿವಾದವನ್ನು ಕೊನೆಗೊಳಿಸಲು ಹಿರಿಯರು ಮುಂದಾಗುತ್ತಾರೆ.
This image has an empty alt attribute; its file name is 2.Taurus-Horoscope-1-1024x1020.png
ವೃಷಭ ರಾಶಿ: ಇಂದು ನೀವು ನಿಮ್ಮ ಸೃಜನಶೀಲ ಚಟುವಟಿಕೆಗಳಿಗೆ ಗಮನ ಕೊಡುತ್ತೀರಿ. ಯಾವುದೇ ಕಾರ್ಯವನ್ನು ತೆಗೆದುಕೊಳ್ಳುವ ಮೊದಲು, ಅದರ ಒಳಿತು ಮತ್ತು ಕೆಡುಕು ಎರಡೂ ಬದಿಗಳನ್ನು ನೋಡಿ. .This image has an empty alt attribute; its file name is 3.Gamini-Horoscope-1024x1019.png ಮಿಥುನ ರಾಶಿ: ನಿರ್ಮಲ ಮನಸ್ಸನ್ನು ಇಟ್ಟುಕೊಳ್ಳಿ. ಮನಸ್ಸನ್ನು ಏರುಪೇರು ಮಾಡಲು ಬಿಡಬೇಡಿ. ಉದ್ವೇಗಕ್ಕೆ ಆಸ್ಪದ ಕೊಡಬೇಡಿ. ನ್ಯಾಯಾಲಯದ ಕಾರ್ಯದಲ್ಲಿಏರುಪೇರು ಕಂಡುಬರಲಿದೆ. ಈ ದಿನವು ವಿದ್ಯಾರ್ಥಿಗಳಿಗೆ ಶುಭವಾಗಲಿದೆ, This image has an empty alt attribute; its file name is 4.Cancer-Horoscope-1024x1020.png
ಕಟಕ ರಾಶಿ: ಭವಿಷ್ಯದ ಯೋಜನೆಗಳನ್ನು ಕುಟುಂಬದೊಂದಿಗೆ ಚರ್ಚಿಸುವಿರಿ. ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ, ಇದರಿಂದಾಗಿ ಮನೆಯ ವಾತಾವರಣವು ಸಂತೋಷವಾಗಿರುತ್ತದೆ. ಪ್ರೀತಿಯ ಜೀವನಕ್ಕಾಗಿ ಸಮಯವನ್ನು ನೀಡಲು ಸಾಧ್ಯವಾಗುತ್ತದೆ.
This image has an empty alt attribute; its file name is 5-copy-1024x1019.png
ಸಿಂಹ ರಾಶಿ: ತಿರುಗಾಟದಿಂದ ವ್ಯಾಪಾರ ಮಾಡುವವರಿಗೆ ಜಾಗ್ರತೆಯ ಅಗತ್ಯವಿದೆ. ಆರ್ಥಿಕ ದೃಷ್ಟಿಯಿಂದ ಹಿಂಬಡ್ತಿ ಇರುವುದು. ಆದರೂ ಧೈರ್ಯದಿಂದ ಮುನ್ನಡೆಯುವುದು ಮುಖ್ಯ. ದೈಹಿಕವಾಗಿ ಮತ್ತು ಮಾನಸಿಕವಾಗಿ ತೊಂದರೆಯಾದರೂ, ನೀವು ಪ್ರತಿ ಕಾರ್ಯದಲ್ಲೂ ನಿಮ್ಮ ನೂರು ಪ್ರತಿಶತ ಪ್ರಯತ್ನವನ್ನು ನೀಡುತ್ತೀರಿ.
This image has an empty alt attribute; its file name is 6-copy-1024x1019.png
ಕನ್ಯಾ ರಾಶಿ: ಶೈಕ್ಷಣಿಕ ಕಾರ್ಯರಂಗದಲ್ಲಿ ಅಭಿವೃದ್ಧಿಯ ದಿನಗಳಿವು. ನಿಮ್ಮ ಕಾರ್ಯವೈಖರಿಗೆ ಹಾಗೂ ತಾಳ್ಮೆ ಸಮಾಧಾನಕ್ಕೆ ಒಳ್ಳೆಯ ಪ್ರಶಂಸೆ ಕಂಡು ಬರಲಿದೆ. ಮುನ್ನಡೆಯಿರಿ. ವೈದ್ಯರಿಗೆ ಉತ್ತಮ ಸಮಯ. ಸ್ನೇಹಿತರ ಸಹಾಯದಿಂದ ವ್ಯವಹಾರದಲ್ಲಿ ಹೂಡಿಕೆ ಮಾಡಿ. This image has an empty alt attribute; its file name is 7-copy-1024x1020.png ತುಲಾ ರಾಶಿ: ಸುಧಾರಣೆಯ ದಿನಗಳಿವು. ಪತ್ನಿಯ ಉದ್ಯೋಗದಲ್ಲಿ ಬಡ್ತಿ ಇರುತ್ತದೆ. ಮಕ್ಕಳಿಂದ ಸುಖ ಸಂತೋಷ ಸಮಾಧಾನವಿರುತ್ತದೆ. ವೃತ್ತಿರಂಗದಲ್ಲಿ ಸ್ವಲ್ಪ ತಿಕ್ಕಾಟದಿಂದ ಬೇಸರವಾಗಲಿದೆ. ಮನೆಗೆ ಸಂಬಂಧಿಕರ ಆಗಮನವಾಗಲಿದೆ.
This image has an empty alt attribute; its file name is 8-copy-1024x1020.png
ವೃಶ್ಚಿಕ ರಾಶಿ: ಆರ್ಥಿಕ ರಂಗದಲ್ಲಿ ಅಭಿವೃದ್ಧಿ ಇರುತ್ತದೆ. ಹಾಗೆಂದುಕೊಂಡು ದುರ್ವ್ಯಸನದಿಂದ ಹಣವನ್ನು ಕಳೆದುಕೊಳ್ಳಬೇಡಿ. ಹಳೆಯ ಗೆಳೆಯರ ಭೇಟಿಯಾಗಲಿದ್ದು ಅವರೊಂದಿಗೆ ಕಾಲ ಕಳೆಯುವಿರಿ. This image has an empty alt attribute; its file name is 9-copy-1024x1019.png ಧನುಸ್ಸು ರಾಶಿ: ವೈಯಕ್ತಿಕ ಸಂಬಂಧಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಬಿಡಬೇಡಿ, ಅದು ನಿಮಗೆ ತೊಂದರೆ ನೀಡುತ್ತದೆ. ಮನೆ ಮತ್ತು ಕುಟುಂಬದ ಸಮಸ್ಯೆಗಳಿಗೆ ಗಮನ ಕೊಡಿ, ಇದರಿಂದ ನಿಮಗೆ ಮಾನಸಿಕ ಶಾಂತಿ ಸಿಗುತ್ತದೆ.
This image has an empty alt attribute; its file name is 10-copy-1024x1020.png
ಮಕರ ರಾಶಿ: ಹೊಸ ಬಗೆಯ ವಾತಾವರಣವು ಮನಸ್ಸಿಗೆ ಮುದ ನೀಡಲಿದೆ. ಶ್ರೀ ದೇವತಾನುಗ್ರಹವು ಉತ್ತಮವಿರುವುದರಿಂದ ಮುನ್ನಡಿ ಇಡುವುದು ನಿಮ್ಮ ಆದ್ಯ ಕರ್ತವ್ಯವಾಗಿದೆ. ಕಿರು ಸಂಚಾರವಿದೆ.
This image has an empty alt attribute; its file name is 11-copy-1024x1019.png
ಕುಂಭ ರಾಶಿ: ಆಕಸ್ಮಿಕವಾಗಿ ಪ್ರಯಾಣದ ಸಂದರ್ಭ ಒದಗಿ ಬರಬಹುದು. ಆದರೆ ನಿಮಗೆ ಅದರಿಂದ ಸಂತಸ ಸಿಗಲಿದೆ. ಕಾರ್ಯಸಾಧನೆಯಾಗಲಿದೆ. ಗೃಹ ಅಥವಾ ವಾಹನ ಖರೀದಿ ಯೋಗವಿದೆ. ದಿನಾಂತ್ಯ ಶುಭ ಸಮಾಚಾರ ಕೇಳುವಿರಿ.
This image has an empty alt attribute; its file name is 12-copy-1024x1019.png
ಮಿನ ರಾಶಿ: ಆರೋಗ್ಯ ಮತ್ತು ಆರ್ಥಿಕ ವಿಷಯಗಳನ್ನು ನಿರ್ಲಕ್ಷಿಸಬೇಡಿ. ನೀವು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲು ಬಯಸಿದರೆ, ಈ ಸಮಯವು ಶುಭವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಹೊಸದನ್ನು ಕಲಿಯಲು ಅವಕಾಶ ಸಿಗುತ್ತದೆ. ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.
Tags

Related Articles

Leave a Reply

Your email address will not be published. Required fields are marked *

Back to top button
Close
Close

Adblock Detected

Please Disable Ad Blockers to get access to the site