ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.ಮೇಷ ರಾಶಿ: ನಿಮ್ಮ ರಾಜಕೀಯ ಪ್ರಭಾವದಿಂದ ಇತರರಿಗೆ ನೆರವು ನೀಡುವ ಅವಕಾಶ ಇದೆ. ಮದುವೆಗಾಗಿ ಸೂಕ್ತ ಸಂಬಂಧದ ಹುಡುಕಾಟದಲ್ಲಿ ಇರುವವರಿಗೆ ದೊರೆಯಲಿದೆ. ನೀವು ಬಹಳ ಸಮಯದಿಂದ ಹುಡುಕುತ್ತಿದ್ದ ವ್ಯಕ್ತಿ ಸಿಗಲಿದ್ದಾರೆ. ಆ ಮೂಲಕ ನಿಮಗೆ ಸಿಗಬೇಕಾದ ಮಾಹಿತಿ ದೊರೆಯಲಿದೆ.
ವೃಷಭರಾಶಿ: ನಿಮ್ಮ ವೈಯಕ್ತಿಕ ವಿಚಾರದಲ್ಲಿ ಬೇರೆಯವರು ವಿಪರೀತ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಮನಸಿಗೆ ಬೇಸರವಾಗುತ್ತದೆ. ಅತಿಯಾಸೆಗೆ ಬಿದ್ದು, ಅಪಾಯದ ವ್ಯವಹಾರಗಳಿಗೆ ಕೈ ಹಾಕಬೇಡಿ. ಷೇರು ಮಾರುಕಟ್ಟೆ ವ್ಯವಹಾರ ಮಾಡುವವರು ಬಹಳ ಎಚ್ಚರಿಕೆಯಿಂದ ಇರಬೇಕು.
.ಮಿಥುನ ರಾಶಿ: ಸಾಂಸಾರಿಕ ಸುಖ ಇರುತ್ತದೆ. ಪ್ರೇಮಿಗಳಿಗೆ ಸುಮಧುರವಾದ ಕ್ಷಣಗಳಿವೆ. ಪಾರ್ಟನರ್ ಷಿಪ್ ವ್ಯವಹಾರ ಮಾಡುವವರಿಗೆ ಲಾಭದ ಪ್ರಮಾಣ ಹೆಚ್ಚಾಗಲಿದೆ. ವೃತ್ತಿಪರವಾಗಿ ಕೆಲವು ಅವಕಾಶಗಳನ್ನು ದಕ್ಕಿಸಿಕೊಳ್ಳುವ ಸಲುವಾಗಿ ದೂರ ಪ್ರಯಾಣ ಮಾಡಲಿದ್ದೀರಿ.
ಕಟಕ ರಾಶಿ: ಬೆಂಕಿ ಮುಂದೆ ಕೆಲಸ ಮಾಡುವವರು ಎಚ್ಚರಿಕೆಯಿಂದ ಇರಬೇಕು. ವಾಹನದಲ್ಲಿ ಪ್ರಯಾಣಿಸುವಾಗ ಏಕಾಗ್ರತೆಯಿಂದ ಇರಬೇಕು. ಕೃಷಿಕರು ಭೂಮಿ ವ್ಯಾಜ್ಯಗಳು ಉದ್ಭವಿಸದಂತೆ ನೋಡಿಕೊಳ್ಳಿ.
ಸಿಂಹ ರಾಶಿ: ಕೋರ್ಟ್- ವ್ಯಾಜ್ಯಗಳಿದ್ದಲ್ಲಿ ಸಂಧಾನದ ಮೂಲಕ ಇತ್ಯರ್ಥ ಮಾಡಿಕೊಳ್ಳುವುದಕ್ಕೆ ಅವಕಾಶ ದೊರೆಯುತ್ತದೆ. ನೀವೇ ಮುಂದೆ ನಿಂತು ಕೆಲವು ಶುಭ ಕಾರ್ಯಗಳನ್ನು ಪೂರ್ತಿ ಮಾಡಿಕೊಡುವಂತೆ ಮನವಿ ಮಾಡಿಕೊಳ್ಳಲಾಗುತ್ತದೆ.
ಕನ್ಯಾ ರಾಶಿ: ನಿಮಗೆ ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ, ಮುಗಿಸುವ ಮೂಲಕ ಎಲ್ಲರ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತೀರಿ. ನಿಮ್ಮ ತೀರ್ಮಾನಗಳ ಮೂಲಕ ಕೆಲಸ ಮಾಡುವ ಸಂಸ್ಥೆಗೆ ಲಾಭ ತಂದುಕೊಡುತ್ತೀರಿ.
ತುಲಾ ರಾಶಿ: ನೀವು ನಿರೀಕ್ಷೆಯೇ ಮಾಡದ ರೀತಿಯಲ್ಲಿ ಹಣಕಾಸಿನ ಅನುಕೂಲ ಒದಗಿಬರಲಿದೆ. ಆದಾಯ ಮೂಲಗಳು ಹೊಸದಾಗಿ ಗೋಚರಿಸುತ್ತವೆ. ವೈದ್ಯರಿಗೆ ಸನ್ಮಾನ- ಗೌರವ ಸಿಗಲಿದೆ. ದೇವತಾರಾಧನೆಯಿಂದ ಮನೆಯಲ್ಲಿ ನೆಮ್ಮದಿ ದೊರೆಯಲಿದೆ.
ವೃಶ್ಚಿಕ ರಾಶಿ: ಕೆಲವೊಮ್ಮೆ ನೀವು ಗೊಂದಲಕ್ಕೊಳಗಾಗುತ್ತೀರಿ. ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ ಇದು ಸಂಭವಿಸಿದಲ್ಲಿ, ಹಿರಿಯರ ಸಲಹೆಯನ್ನು ಪಡೆಯಿರಿ ಅಥವಾ ಸ್ವಲ್ಪ ಸಮಯದವರೆಗೆ ಅದನ್ನು ಮುಂದೂಡಿ.
ಧನುಸ್ಸು ರಾಶಿ: ಖರ್ಚಿನ ಪ್ರಮಾಣದಲ್ಲಿ ವಿಪರೀತ ಹೆಚ್ಚಾಗಲಿದೆ. ಈ ಹಿಂದಿನ ಆರೋಗ್ಯ ಸಮಸ್ಯೆಗಳು ಕಾಡುತ್ತಿದ್ದಲ್ಲಿ ಅದು ಉಲ್ಬಣ ಆಗುವ ಸಾಧ್ಯತೆ ಇದೆ. ಸೂಕ್ತ ಔಷಧೋಪಚಾರದ ಕಡೆಗೆ ಗಮನ ನೀಡಿ. ಹೂಡಿಕೆ ಅಥವಾ ಉಳಿತಾಯ ಹಣದಲ್ಲಿ ಹೊಸದಾಗಿ ಯಾವ ಸಾಹಸಕ್ಕೂ ಇಳಿಯಬೇಡಿ.
ಮಕರ ರಾಶಿ: ಏಕಾಗ್ರತೆಯಿಂದ ಕೆಲಸ- ಕಾರ್ಯದಲ್ಲಿ ತೊಡಗಿಕೊಳ್ಳಿ. ಶತ್ರುಗಳು ನಿಮ್ಮ ಪ್ರಯತ್ನಗಳಿಗೆ ಅಡ್ಡಗಾಲಾಗಿ ನಿಲ್ಲುತ್ತಾರೆ. ಉದ್ಯೋಗದಲ್ಲಿ ನಾನಾ ಬಗೆಯಲ್ಲಿ ಸಮಸ್ಯೆಗಳು ಎದುರಾಗಬಹುದು. ನಿಮಗಿಂತ ಮೇಲ್ ಸ್ತರದ ಅಧಿಕಾರಸ್ಥರನ್ನು ಎದುರು ಹಾಕಿಕೊಳ್ಳುವ ಮುನ್ನ ಪೂರ್ವಾಪರ ಆಲೋಚನೆ ಮಾಡಿ.
ಕುಂಭ ರಾಶಿ: ನಿಮ್ಮ ಹತ್ತಿರ ಎಷ್ಟು ಹಣ ಇದೆಯೋ ಅಷ್ಟಕ್ಕೆ ಮಾತ್ರ ಜವಾಬ್ದಾರಿ ತೆಗೆದುಕೊಳ್ಳಿ. ಕೈ ಮೀರಿ ಖರ್ಚುಗಳನ್ನು ಮೈ ಮೇಲೆ ಎಳೆದುಕೊಂಡಲ್ಲಿ ಕಷ್ಟವಾಗಲಿದೆ. ವ್ಯಾಪಾರ- ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಬರಬೇಕಾದ ಹಣದಲ್ಲಿ ಪೂರ್ತಿಯಾಗಿ ಬಾರದೆ ಚಿಂತೆಗೆ ಕಾರಣ ಆಗಲಿದೆ.
ಮಿನ ರಾಶಿ: ಸೋದರ- ಸೋದರಿಯರ ಜತೆಗೆ ಉತ್ತಮ ಸಮಯ ಕಳೆಯಲಿದ್ದೀರಿ. ಈ ಹಿಂದೆ ನೀವು ತೆಗೆದುಕೊಂಡಿದ್ದ ಕೆಲವು ಆತುರದ ತೀರ್ಮಾನದಿಂದ ಈಗ ಅವಮಾನದ ಪಾಲಾಗಲಿದ್ದೀರಿ. ಉದ್ಯೋಗ ಬದಲಾವಣೆಗೆ ಪ್ರಯತ್ನಿಸುತ್ತಿದ್ದಲ್ಲಿ ಯಾವ ವಿಚಾರವನ್ನೂ ಮುಚ್ಚಿಡದೆ ಹೇಳಿಕೊಳ್ಳಿ. ಪಾರದರ್ಶಕವಾಗಿ ಇರಿ.
ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.