ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.ಮೇಷ ರಾಶಿ: ನಿರೀಕ್ಷಿತ ಸ್ಥಳಕ್ಕೆ ವರ್ಗಾವಣೆ ದೊರೆಯುವ ಸಾಧ್ಯತೆ ಇದೆ. ಸ್ವಂತ ವ್ಯಾಪಾರ- ವ್ಯವಹಾರ ಮಾಡುತ್ತಿರುವವರು ವಿಸ್ತರಣೆಗೆ ಪ್ರಯತ್ನಿಸುತ್ತಿದ್ದರೆ ಯಶಸ್ಸು ದೊರೆಯುತ್ತದೆ. ನೇರವಂತಿಕೆ ಕಾರಣಕ್ಕೆ ಇತರರ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ.
ವೃಷಭರಾಶಿ: ಸಹೋದ್ಯೋಗಿಗಳು ನಿಮ್ಮ ನಿರೀಕ್ಷೆಯಂತೆ ಕೆಲಸ ಮಾಡುತ್ತಿಲ್ಲ ಎಂದು ಸಿಟ್ಟನ್ನು ಹೊರಹಾಕುತ್ತೀರಿ. ಹೊಟ್ಟೆಗೆ ಸಂಬಂಧಿಸಿದಂತೆ ಅನಾರೋಗ್ಯ ಸಮಸ್ಯೆ ನಿಮ್ಮನ್ನು ಕಾಡಬಹುದು. ಔತಣಕೂಟಕ್ಕೆ ಆಹ್ವಾನ ಬರಲಿದ್ದು, ಸಂಬಂಧಿಗಳ ಮನೆಯಲ್ಲಿ ದೇವತಾರಾಧನೆಗೆ ಆಹ್ವಾನ ಬರಲಿದೆ
.ಮಿಥುನ ರಾಶಿ: ದೈನಂದಿನ ಕೆಲಸ- ಕಾರ್ಯಗಳಲ್ಲಿ ನಾನಾ ಬಗೆಯ ಅಡೆತಡೆ ಕಾಣಿಸಿಕೊಳ್ಳುತ್ತದೆ. ಸಮಯಕ್ಕೆ ಸರಿಯಾಗಿ ಸಾಲ ಪಾವತಿ ಆಗಿದೆಯಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಹೊಸಬರ ಜತೆಗೆ ಹಣಕಾಸಿನ ವ್ಯವಹಾರ ಮಾಡುವಾಗ ಎಚ್ಚರಿಕೆ ಮುಖ್ಯ.
ಕಟಕ ರಾಶಿ: ಪೋಷಕರಿಗೆ ಅಥವಾ ತಂದೆ- ತಾಯಿ ಸಮಾನರಿಗೆ ತೀರ್ಥಕ್ಷೇತ್ರಗಳ ಪ್ರವಾಸ ಮಾಡಿಸುವ ಯೋಗ ಇದೆ. ಗುರು- ಹಿರಿಯರ ಆಶೀರ್ವಾದ ನಿಮ್ಮ ಮೇಲೆ ಇರಲಿದೆ. ಕೆಲಸದ ಒತ್ತಡದ ಕಾರಣಕ್ಕೆ ದೇಹಾಯಾಸ ಆಗಲಿದ್ದು, ವಿಶ್ರಾಂತಿಯ ಅಗತ್ಯ ಕಂಡುಬರುತ್ತದೆ.
ಸಿಂಹ ರಾಶಿ: ಬಡ್ತಿ, ವೇತನ ಹೆಚ್ಚಳದ ನಿರೀಕ್ಷೆಯಲ್ಲಿ ಇರುವವರಿಗೆ ಗೊಂದಲದ ಸ್ಥಿತಿ ಸೃಷ್ಟಿಯಾಗಲಿದೆ. ಸ್ವಂತ ವ್ಯಾಪಾರ- ವ್ಯವಹಾರ ಶುರು ಮಾಡಬೇಕು ಅಂದುಕೊಳ್ಳುತ್ತಿರುವವರಿಗೆ ಸೂಕ್ತ ವ್ಯಕ್ತಿಗಳ ಪರಿಚಯ ಆಗಲಿದೆ.
ಕನ್ಯಾ ರಾಶಿ: ಭವಿಷ್ಯದ ಯೋಜನೆಯೊಂದಕ್ಕೆ ಹಣಕಾಸು ಹೊಂದಿಸಲು ಬ್ಯಾಂಕ್- ಹಣಕಾಸು ಸಂಸ್ಥೆಗಳಲ್ಲಿ ಪ್ರಯತ್ನಿಸಲಿದ್ದೀರಿ. ಕಾಲು- ಬೆನ್ನು ನೋವು ಇರುವವರು ಕಡ್ಡಾಯವಾಗಿ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಿರಿ. ತುಲಾ ರಾಶಿ: ಈ ದಿನ ನಿರುತ್ಸಾಹ ನಿಮ್ಮನ್ನು ಕಾಡುತ್ತದೆ. ಎಷ್ಟು ಕೆಲಸ ಮಾಡಿದರೂ ಇಷ್ಟೇ ಎಂಬ ಮನೋಭಾವ ಕಾಣಿಸಿಕೊಳ್ಳುತ್ತದೆ. ಮುಖ್ಯವಾದ ಕೆಲಸವೊಂದನ್ನು ಕಣ್ತಪ್ಪಿನಿಂದಾಗಿ ಮಾಡದೆ ಬೈಗುಳ ಕೇಳಿಸಿಕೊಳ್ಳಬೇಕಾಗುತ್ತದೆ.
ವೃಶ್ಚಿಕ ರಾಶಿ: ಆಪ್ತರ ಮೇಲೆ ಅನುಮಾನ ಪಡುವಂಥ ಸನ್ನಿವೇಶಗಳು ಸೃಷ್ಟಿ ಆಗುತ್ತವೆ. ಉದ್ಯೋಗ ಸ್ಥಳದಲ್ಲಿ ಮೇಲಧಿಕಾರಿಗಳಿಂದ ಒತ್ತಡ ಬೀಳುತ್ತದೆ. ಪ್ರೇಮಿಗಳ ಮಧ್ಯೆ ಸಣ್ಣ- ಪುಟ್ಟ ವಿಚಾರಕ್ಕೆ ಭಿನ್ನಾಭಿಪ್ರಾಯ ಸೃಷ್ಟಿ ಆಗಬಹುದು. ಧನುಸ್ಸು ರಾಶಿ: ಆತುರದಲ್ಲಿ ಯಾವುದೇ ಹಣಕಾಸಿನ ತೀರ್ಮಾನ ಮಾಡಬೇಡಿ. ಉದ್ಯೋಗದ ಹೊರತಾಗಿ ಆದಾಯ ಬರುವಂಥ ಯೋಜನೆ ರೂಪಿಸುವುದಕ್ಕಾಗಿ ನಿಮ್ಮ ಜವಾಬ್ದಾರಿಯನ್ನು ನಿರ್ಲಕ್ಷಿಸಬೇಡಿ.
ಮಕರ ರಾಶಿ: ಕಣ್ಣು- ಹಲ್ಲಿನ ಸಮಸ್ಯೆ ನಿಮ್ಮನ್ನು ಕಾಡಬಹುದು. ಯಾರೋ ಹೇಳಿದ ಚಾಡಿ ಮಾತನ್ನು ನಂಬಿಕೊಂಡು ಆಪ್ತರನ್ನು ಅನುಮಾನಿಸಿದರೆ ಸಂಬಂಧ ಹಾಳಾದೀತು,
ಕುಂಭ ರಾಶಿ: ಔಷಧಗಳನ್ನು ಬದಲಾಯಿಸುವಂತಿದ್ದಲ್ಲಿ ಸೂಕ್ತ ಸಲಹೆ ಪಡೆದು, ಮುಂದುವರಿಯಿರಿ. ಅಲರ್ಜಿ ಸಮಸ್ಯೆ ನಿಮ್ಮನ್ನು ಕಾಡಬಹುದು. ದಿಢೀರ್ ಪ್ರಯಾಣದಿಂದ ಅಲ್ಪ ಪ್ರಮಾಣದಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ.
ಮಿನ ರಾಶಿ: ಮಕ್ಕಳ ಪ್ರಗತಿಯಿಂದ ಹೆಮ್ಮೆ ಪಡುತ್ತೀರಿ. ಉನ್ನತ ಶಿಕ್ಷಣ, ಮದುವೆ ಇತ್ಯಾದಿ ಉದ್ದೇಶಕ್ಕೆ ಹಣ ಉಳಿತಾಯ ಮಾಡುವ ಯೋಜನೆ ರೂಪಿಸಲಿದ್ದೀರಿ. ಸೋದರ- ಸೋದರಿಯರ ಜತೆಗೆ ಹಣಕಾಸಿನ ವಿಚಾರವಾಗಿ ಸಣ್ಣ- ಪುಟ್ಟ ಭಿನ್ನಾಭಿಪ್ರಾಯ ಕಾಣಿಸಿಕೊಳ್ಳಲಿದೆ,
ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.