Nithya BhavishyaRashi Bhavishya

ಕಟೀಲು ಶ್ರೀ ದುರ್ಗಾ ಪರಮೇಶ್ಧ್ವರಿಯನ್ನು ಮನಸಾ ಪ್ರಾರ್ಥಿಸುತ್ತ 25-08-2020ರ ಮೈ ಆಚಾರ್ಯ ನಿತ್ಯ ಭವಿಷ್ಯ

ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.
This image has an empty alt attribute; its file name is 1.Arise-Horoscope-1024x1019.png
ಮೇಷ ರಾಶಿ: ದೀರ್ಘವಾದ ಪಯಣವೊಂದರ ಮುನ್ಸೂಚನೆ ಬಗ್ಗೆ ಯಾರಿಂದಾದರೂ ನಿಮಗೆ ಮಾಹಿತಿ ದೊರೆಯಲಿದೆ. ವ್ಯಾಪಾರ- ವ್ಯವಹಾರ ಮಾಡುತ್ತಿರುವವರು ಕೆಲವು ಬದಲಾವಣೆಗಳನ್ನು ತರಲಿದ್ದೀರಿ. ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಉದ್ಯೋಗ ಬದಲಾವಣೆ ಸಾಧ್ಯತೆಗಳಿವೆ.
This image has an empty alt attribute; its file name is 2.Taurus-Horoscope-1-1024x1020.png
ವೃಷಭ ರಾಶಿ: ಸಣ್ಣ- ಪುಟ್ಟ ಕಾರಣಗಳಿಗಾದರೂ ವೈದ್ಯರನ್ನು ಭೇಟಿ ಆಗುವಂಥ ಸಾಧ್ಯತೆ ಇದೆ. ದೈಹಿಕ ಆರೋಗ್ಯದ ಕಡೆಗೆ ಹೆಚ್ಚು ನಿಗಾ ಮಾಡಿ. ಸಂತಾನ ಅಪೇಕ್ಷಿತ ದಂಪತಿಗೆ ಶುಭ ಸುದ್ದಿ ಕೇಳುವಂಥ ಯೋಗ ಇದೆ. ರುಚಿಕಟ್ಟಾದ ಊಟ- ತಿಂಡಿ ಸವಿಯಲಿದ್ದೀರಿ. ಬಂಧುಗಳ ಆಗಮನದಿಂದ ಮನಸ್ಸಿಗೆ ಸಂತೋಷ ಆಗಲಿದೆ. .This image has an empty alt attribute; its file name is 3.Gamini-Horoscope-1024x1019.png ಮಿಥುನ ರಾಶಿ: ಈ ದಿನ ಆಲಸ್ಯ ನಿಮ್ಮನ್ನು ಕಾಡಲಿದೆ. ಒಂದೇ ಕೆಲಸವನ್ನು ಪದೇ ಪದೇ ಮಾಡಬೇಕಾದ ಪರಿಸ್ಥಿತಿಯೂ ಬರಬಹುದು. ಯಾವುದೇ ಕಾರಣಕ್ಕೂ ಏಕಾಗ್ರತೆ ಕಳೆದುಕೊಳ್ಳಬೇಡಿ. ಸಂಗಾತಿಯೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಿರಿ. This image has an empty alt attribute; its file name is 4.Cancer-Horoscope-1024x1020.png
ಕಟಕ ರಾಶಿ: ಮನೆಯ ಹಿರಿಯರು ಬಹಳ ಮುಖ್ಯವಾದ ಮಾಹಿತಿಯೊಂದನ್ನು ನಿಮ್ಮ ಜತೆಗೆ ಹಂಚಿಕೊಳ್ಳುವ ಸಾಧ್ಯತೆ ಇದೆ. ಇದರಿಂದ ಭವಿಷ್ಯದಲ್ಲಿ ಕೆಲ ಅನುಕೂಲಗಳಿವೆ. ಆದ್ದರಿಂದ ಸದುಪಯೋಗ ಮಾಡಿಕೊಳ್ಳಿ, ಹಿರಿಯರನ್ನು ಗೌರವಿಸಿ.
This image has an empty alt attribute; its file name is 5-copy-1024x1019.png
ಸಿಂಹ ರಾಶಿ: ದೂರದ ಸ್ಥಳಗಳಿಂದ ವಿಚಿತ್ರ ಬಗೆಯ ಸುದ್ದಿ, ಬೇಡಿಕೆಗಳು ಕೇಳಿಬರುತ್ತವೆ. ನಿಮ್ಮ ಶಕ್ತಿ ಮೀರಿ ಪ್ರಯತ್ನಿಸಿದರೂ ಎದುರಿನವರ ನಿರೀಕ್ಷೆ ಏನು ಎಂಬುದು ತಿಳಿದುಕೊಳ್ಳಲು ಆಗುವುದಿಲ್ಲ, ಕುಟುಂಬದಲ್ಲಿ ತೊಂದರೆ ಬರುವುದು.
This image has an empty alt attribute; its file name is 6-copy-1024x1019.png
ಕನ್ಯಾ ರಾಶಿ: ಗುರು- ಹಿರಿಯರ ಆಶೀರ್ವಾದ ನಿಮ್ಮ ಮೇಲೆ ಇರಲಿದೆ. ಅನಿರೀಕ್ಷಿತವಾಗಿ ಧನಾಗಮ ಇದ್ದು, ಬಂದ ಹಣ ಹಾಗೇ ಖರ್ಚು ಕೂಡ ಆಗುತ್ತದೆ. ಆದ್ದರಿಂದ ಖರ್ಚಿನ ಮೇಲೆ ಹೆಚ್ಚಿನ ನಿಗಾ ಇರಲಿ. ಇತರರು ಹೊಗಳಿದರು ಎಂಬ ಕಾರಣಕ್ಕೆ ಧಾರಾಳವಾಗಿ ಹಣ ನೀಡಬೇಡಿ. This image has an empty alt attribute; its file name is 7-copy-1024x1020.png ತುಲಾ ರಾಶಿ: ನಿಮ್ಮ ಮಾತನ್ನೇ ಬಂಡವಾಳ ಮಾಡಿಕೊಂಡು ಹಲವು ಸವಾಲುಗಳನ್ನು ಈ ದಿನ ದಾಟಲಿದ್ದೀರಿ. ಚಂಚಲ ಚಿತ್ತದಿಂದ ಲಾಭದ ಪ್ರಮಾಣ ಕಡಿಮೆ ಆಗುವ ಸಾಧ್ಯತೆ ಇದೆ. ಸ್ನೇಹಿತರು- ಬಂಧುಗಳು ನಿಮ್ಮಿಂದ ನೆರವು ಕೇಳಿಕೊಂಡು ಬರಬಹುದು. ಹೌದು ಅಥವಾ ಇಲ್ಲ ಏನನ್ನೂ ಹೇಳಲಾಗದಂಥ ಗೊಂದಲ ಸನ್ನಿವೇಶ ಏರ್ಪಡಲಿದೆ.
This image has an empty alt attribute; its file name is 8-copy-1024x1020.png
ವೃಶ್ಚಿಕ ರಾಶಿ: ನಿಮ್ಮ ಕಲ್ಪನಾಶಕ್ತಿಯ ಪೂರ್ಣ ಪ್ರಯೋಜನ ಈಗ ಆಗಲಿದೆ. ಉದ್ಯೋಗಸ್ಥರು ಅದೆಂಥ ಸಣ್ಣ ಜವಾಬ್ದಾರಿಯೇ ವಹಿಸಿಕೊಂಡಿದ್ದರೂ ಶ್ರದ್ಧೆಯಿಂದ ಮಾಡಿ ಮುಗಿಸಿ. ಸಣ್ಣ ನಿರ್ಲಕ್ಷ್ಯ ಕೂಡ ದೊಡ್ಡ ಬೆಲೆ ತೆರುವಂತೆ ಮಾಡುತ್ತದೆ. ಜಾಗ್ರತೆವಹಿಸಿ. . This image has an empty alt attribute; its file name is 9-copy-1024x1019.png ಧನುಸ್ಸು ರಾಶಿ: ಬೇರೆಯವರ ಬಗ್ಗೆ ಕೇಳಿಬರುವ ಗಾಸಿಪ್ ಗಳಿಗೆ ಯಾವ ಸ್ಪಂದನೆಯನ್ನೂ ನೀಡಬೇಡಿ. ನಿಮ್ಮ ಕೆಲಸದ ಕಡೆಗೆ ಈ ಹಿಂದೆಂದಿಗಿಂತ ಹೆಚ್ಚು ಗಮನ ನೀಡುವ ಅಗತ್ಯವಿದೆ. ಸ್ವಂತ ಮನೆ, ಕಾರು ಖರೀದಿ ಮಾಡಬೇಕು ಅಂತ ಇದ್ದಲ್ಲಿ ನಿಮ್ಮಿಂದ ಸಾಧ್ಯವಿರುವ ಮೊತ್ತ ಎಷ್ಟು ಎಂಬ ಬಗ್ಗೆ ಸ್ಪಷ್ಟತೆ ಇರಲಿ.
This image has an empty alt attribute; its file name is 10-copy-1024x1020.png
ಮಕರ ರಾಶಿ: ನಿಮಗೆ ಆಪ್ತರು ಎಂಬ ಕಾರಣಕ್ಕೆ ಯಾವುದೋ ಒಬ್ಬ ವ್ಯಕ್ತಿಯ ಬಗ್ಗೆ ಇತರರಿಗೆ ಆಕ್ಷೇಪ ಇರಬಾರದು ಎಂದು ನಿರೀಕ್ಷೆ ಮಾಡುವುದು ಅತಿಯಾಗುತ್ತದೆ. ಬೇರೆಯವರ ವೈಯಕ್ತಿಕ ವಿಷಯಗಳಿಗೆ ತಲೆ ಹಾಕಬೇಡಿ. ಕ್ಷುಲ್ಲಕ ವಿಷಯಗಳ ಬಗ್ಗೆ ಅತಿಯಾದ ಆಸಕ್ತಿ ಒಳ್ಳೆಯದಲ್ಲ. ಇದರಿಂದ ಅವಮಾನದ ಪಾಲಾಗುತ್ತೀರಿ.
This image has an empty alt attribute; its file name is 11-copy-1024x1019.png
ಕುಂಭ ರಾಶಿ: ಯಾರನ್ನೋ ಸುಧಾರಣೆ ಮಾಡಲು ಚಿಂತಿಸುವ ಬದಲಿಗೆ ನಿಮ್ಮನ್ನು ನೀವು ಬದಲಾವಣೆ ಮಾಡಿಕೊಳ್ಳುವ ಅಗತ್ಯವಿದೆ. ಸಿಟ್ಟು ಕಡಿಮೆ ಮಾಡಿಕೊಳ್ಳಿ. ಯಾವುದೇ ವಿಚಾರವನ್ನು ಪೂರ್ತಿಯಾಗಿ ಕೇಳಿಸಿಕೊಳ್ಳಿ. ನಿಮ್ಮಿಂದ ಸಾಧ್ಯವಾಗದ ಕೆಲಸ ಎಂದಾದಲ್ಲಿ ಅದನ್ನು ಒಪ್ಪಿಕೊಳ್ಳುವ ಸ್ವಭಾವ ಬೆಳೆಸಿಕೊಳ್ಳಿ.
This image has an empty alt attribute; its file name is 12-copy-1024x1019.png
ಮಿನ ರಾಶಿ: ಆನ್ ಲೈನ್ ವ್ಯವಹಾರಗಳು, ವ್ಯಾಪಾರದಲ್ಲಿ ತೊಡಗಿಕೊಂಡವರಿಗೆ ಹೊಸ ಅವಕಾಶಗಳು ಗೋಚರ ಆಗುತ್ತವೆ. ಈ ಹಿಂದೆ ನಿಮಗೆ ಯಾರು ತೊಂದರೆ ನೀಡಿದ್ದರೋ ಅವರಾಗಿಯೇ ಸಹಾಯ ಕೇಳಿಕೊಂಡು ಬರುವ ಸಾಧ್ಯತೆ ಇದೆ. ಯಾವುದರ ಬಗ್ಗೆಯೂ ಅತಿಯಾದ ನಿರೀಕ್ಷೆ ಇರಿಸಿಕೊಳ್ಳದೆ ನಿಮ್ಮ ಕೆಲಸ ಮಾಡಿಕೊಂಡು ಮುಂದೆ ಸಾಗಿ.   ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.
Tags

Related Articles

Leave a Reply

Your email address will not be published. Required fields are marked *

Back to top button
Close
Close

Adblock Detected

Please Disable Ad Blockers to get access to the site