ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.ಮೇಷ ರಾಶಿ: ಜೀವನದಲ್ಲಿಹಿರಿಯರನ್ನು ಸದಾ ಕಾಲವೂ ಗೌರವದಿಂದ ಕಾಣುವ ನಿಮಗೆ ವಿಶೇಷ ಪ್ರಶಂಸೆಯ ಯೋಗವಿದೆ. ನೀವು ಇತರರಂತೆ ಸುಳ್ಳು ಆಶ್ವಾಸನೆ ಕೊಡುವಂಥವರಲ್ಲ. ನೀವು ಆಸ್ತಿಯಿಂದ ಲಾಭ ಪಡೆಯುತ್ತೀರಿ. ಕಳೆದುಹೋದ ಹಣ ಅಥವಾ ಬರಬೇಕಾಗಿದ್ದ ಹಣ ಕೈಸೇರುತ್ತದೆ.
ವೃಷಭರಾಶಿ: ಜನಪ್ರಿಯತೆ, ಜನಬೆಂಬಲಗಳನ್ನು ಕ್ರೋಢೀಕರಿಸಿಕೊಳ್ಳಲು ರಾಜಕೀಯ ಕ್ಷೇತ್ರದವರಿಗೆ ಯೋಗ್ಯ ದಿನ. ಭಾವನಾತ್ಮಕ ತಲ್ಲಣಗಳನ್ನು ನಿಯಂತ್ರಣ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ತೊಂದರೆ ಎದುರಾಗುವುದು ನಿಶ್ಚಿತ. ಸಮಯದ ಲಾಭವನ್ನು ಪಡೆದುಕೊಳ್ಳಿ. ಇದು ಶುಭ ಫಲಿತಾಂಶಗಳನ್ನು ನೀಡುತ್ತದೆ.
.ಮಿಥುನ ರಾಶಿ: ದೂರದ ಬಂಧುವೊಬ್ಬರನ್ನು ಭೇಟಿಯಾಗಲು ಹಲವು ಕಾರಣಗಳು ಕೂಡಿ ಬರಬಹುದು. ವಿಭಿನ್ನ ಅನುಭವಗಳು ಎದುರಾಗಲಿವೆ. ಸಮಾಜದಲ್ಲಿಸಕಾರಾತ್ಮಕವಾಗಿ ಗುರುತಿಸಿಕೊಂಡ ನೀವು ಅದರಿಂದಾಗಿಯೇ ಹೆಚ್ಚು ಹೆಚ್ಚು ಅರ್ಥಪೂರ್ಣತೆ ಪಡೆಯಲಿದ್ದೀರಿ.
ಕಟಕ ರಾಶಿ: ಹೋಟೆಲ್, ಹೋಮ್ ಸ್ಟೇ, ಪ್ರವಾಸೋದ್ಯಮ ಇತ್ಯಾದಿ ಕ್ಷೇತ್ರಗಳಲ್ಲಿತೊಡಗಿರುವವರಿಗೆ ಲಾಭದಾಯಕ ದಿನವಾಗಿದೆ. ವಿವಾಹಾಪೇಕ್ಷಿ ಯೋಗ್ಯವಾದ ಸಂಗಾತಿಯ ಹುಡುಕಾಟದಲ್ಲಿದ್ದರೆ ಇಂದು ಸಿದ್ಧಿ ಪಡೆಯುವ ವಿಶೇಷ ಅವಕಾಶವಿದೆ. ವ್ಯರ್ಥ ಖರ್ಚು ಇರುತ್ತದೆ.
ಸಿಂಹ ರಾಶಿ: ಸಾಕು ಪ್ರಾಣಿಗಳು ಕಿರಿಕಿರಿ ಉಂಟುಮಾಡಬಹುದು. ಹೀಗಾಗಿ ಅವುಗಳಿಗೆ ಅನಗತ್ಯ ಸಲುಗೆ ನೀಡಬೇಡಿ. ವೃತ್ತಿಯಲ್ಲಿ ತುಸು ಏರುಪೇರು ಆಯಿತೆಂದು ಅನಿಸಿದರೂ ದಿನದ ಕೊನೆಯ ಹೊತ್ತಿಗೆ ಶುಭ ಸಮಾಚಾರವನ್ನು ಕೇಳುವಿರಿ.ಇಂದು ಬಿಡುವಿಲ್ಲದ ದಿನವಾಗಿರುತ್ತದೆ,
ಕನ್ಯಾ ರಾಶಿ: ಕುಟುಂಬದ ಸದಸ್ಯರ ಬೆಂಬಲದೊಂದಿಗೆ ಧೈರ್ಯದಿಂದ ಮುನ್ನುಗ್ಗಿದರೆ ಕ್ರಿಯಾಶೀಲತೆ ನಿಮ್ಮ ಕೈ ಹಿಡಿಯಲಿದೆ. ಕಚೇರಿಯಲ್ಲಿ ವಿಶೇಷವಾದ ಸೌಲಭ್ಯಗಳಿಗೆ ಪಾತ್ರರಾಗಲಿದ್ದೀರಿ. ಮಿತ್ರರೊಂದಿಗೆ ಸಮಯ ಕಳೆಯುವಿರಿ. . ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡಲು ನಿಮಗೆ ಅವಕಾಶ ಸಿಗುತ್ತದೆ.
ತುಲಾ ರಾಶಿ: ಮನಬಂದಂತೆ ಚಿನ್ನಾಭರಣಗಳನ್ನು ಖರೀದಿ ಮಾಡುವುದು ಒಳಿತನ್ನು ತರಲಾರದು. ಉಳಿತಾಯದಿಂದ ಒಳಿತಿದೆ. ನಂಬಿಕೆಗಳ ಪ್ರಶ್ನೆ ಈಗ ಪ್ರಮುಖವಲ್ಲ. ಇಂದಿನ ವ್ಯವಹಾರದ ಕಾರ್ಯಶೀಲತೆಯೇ ನಿಮ್ಮ ಪ್ರಮುಖ ಆದ್ಯತೆಯಾಗಿರಲಿ.
ವೃಶ್ಚಿಕ ರಾಶಿ: ಬೌದ್ಧಿಕವಾದ ಸಾಮರ್ಥ್ಯವಿರಲಿ. ದೂರ ಪ್ರಯಾಣದ ಏರ್ಪಾಡು ಹಾಕಿಕೊಂಡಿದ್ದರೆ ಕೂಡಲೇ ಅದರ ಬಗೆಗಿನ ರೂಪುರೇಷಗಳನ್ನು ಸಿದ್ದಪಡಿಸಿಕೊಂಡರೆ ಒಳಿತು. ಇಂದು, ಗ್ರಹಗಳ ಶುಭ ಪರಿಣಾಮಗಳಿಂದಾಗಿ, ನೀವು ವ್ಯವಹಾರದಲ್ಲಿ ವಿಸ್ತರಣೆಯನ್ನು ಪಡೆಯಬಹುದು
ಧನುಸ್ಸು ರಾಶಿ: ಏನು ಮಾಡಿದರೂ ಅರಗಿಸಿಕೊಳ್ಳಬಹುದು ಎಂಬ ಚಿಂತನೆ ಸಮಂಜಸವಾದುದಲ್ಲ. ಸಾಧ್ಯವಾದಷ್ಟು ತಾಳ್ಮೆವಹಿಸಿ. ನೀವು ಅನನ್ಯವಾದ ಆಲೋಚನಾಶಕ್ತಿ ಹೊಂದಿರುವಿರಿ. ಆದರೆ ಅವಸರದಿಂದ ಕೆಲಸ ಮಾಡಲು ಮುಂದಾಗದಿರಿ. ಕೆಲವು ಸಮಯದಿಂದ ನಡೆಯುತ್ತಿರುವ ಒತ್ತಡವು ಇಂದು ಕೊನೆಗೊಳ್ಳುತ್ತದೆ..
ಮಕರ ರಾಶಿ: ಗ್ರಹಚಾರದ ದುರ್ಬಲ ಪರಿಸ್ಥಿತಿ ಎದುರಿಸುತ್ತಿದ್ದೀರಿ. ಹೀಗಾಗಿ ಯಾವುದೇ ಬಗೆಯ ಮಾತಿನ ಆರ್ಭಟ ತೋರಲು ಮುಂದಾಗದಿರಿ. ನಿಮ್ಮ ಉದ್ಯಮ ಸಂಬಂಧಿ ಪಾಲುದಾರರ ಆಯ್ಕೆಯಲ್ಲಿ ಚಾತುರ್ಯವಿರಲಿ. ಈ ದಿನ ನೀವು ಒಂದು ಕಡೆಯಿಂದ ಲಾಭ ಪಡೆದರೂ,ಇನ್ನೊಂದು ಕಡೆಯಿಂದ ನಷ್ಟವಾಗಬಹುದು.
ಕುಂಭ ರಾಶಿ: ನಿಮ್ಮ ಎಲ್ಲಾ ಕೆಲಸಗಳು ಯಶಸ್ವಿಯಾಗುವ ಸಾಧ್ಯತೆ ಇದೆ. ಆರೋಗ್ಯ ಸುಧಾರಿಸಲಿದೆ. ಇದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ನಿಂತುಹೋದ ಕಾರ್ಯ ಮತ್ತೆ ಪ್ರಾರಂಭವಾಗುವುದಕ್ಕೆ ಅವಕಾಶಗಳು ದೊರೆಯಲಿವೆ. ಹಣದ ವಿಷಯದಲ್ಲಿ, ಇಂದು ನೀವು ಲಾಭ ಗಳಿಸುವ ಎಲ್ಲ ಭರವಸೆ ಇದೆ.
ಮಿನ ರಾಶಿ: ಎಲ್ಲಾ ಕೆಲಸ ಕಾರ್ಯಗಳು ಸರಿಯಾಗಿ ನಡೆಯುವಂತೆ ನೋಡಿಕೊಳ್ಳಿ. ಧೈರ್ಯ ಹಾಗೂ ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ನಿಮ್ಮ ಹಿರಿಯರ ಮಾತಿಗೆ ಬೆಲೆ ಕೊಟ್ಟು ಅವರ ಮಾತಿನಂತೆ ನಡೆದುಕೊಳ್ಳಿ. ಯಶಸ್ಸಿದೆ. ಇಂದು ನಿಮ್ಮ ಸ್ಥಗಿತಗೊಂಡ ಕೆಲಸ ಪೂರ್ಣಗೊಳ್ಳುತ್ತದೆ
ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.