ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.ಮೇಷ ರಾಶಿ: ರಾಜಕೀಯ ವರ್ಗದವರು ಎಲ್ಲರ ಸಂಪರ್ಕವಿಟ್ಟುಕೊಂಡಲ್ಲಿ ಕಾರ್ಯಸಾಧನೆಗೆ ಅನುಕೂಲವಾಗಲಿದೆ. ಕಾರ್ಯಕ್ಷೇತ್ರದಲ್ಲಿ ಸ್ವಂತ ಪ್ರಯತ್ನದಿಂದಲೇ ಕಾರ್ಯಸಾಧನೆಯಾಗಲಿದೆ. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಜಾಗ್ರತೆ ಇರಲಿ
ವೃಷಭರಾಶಿ: ಆರ್ಥಿಕವಾಗಿ ಖರ್ಚುವೆಚ್ಚಗಳ ಬಗ್ಗೆ ಗಮನಹರಿಸಿ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ನಿರುತ್ಸಾಹ ಕಾಡಲಿದೆ. ಗೃಹಸುಖ ಸಮಾಧಾನ ತರುತ್ತಿದೆ. ಬೇಸಾಯಗಾರರಿಗೆ ಕಾಯುವಂತಹ ಪರಿಸ್ಥಿತಿ ಕಂಡು ಬರಲಿದೆ.
.ಮಿಥುನ ರಾಶಿ: ಯಾರಾದರೂ ಹೊಸ ಉದ್ಯಮವನ್ನು ಪ್ರಾರಂಭಿಸುವ ಬಗ್ಗೆ ಯೋಚಿಸುತ್ತಿದ್ದರೆ ಖಂಡಿತವಾಗಿಯೂ ಮಾಡಿ, ನೀವು ಯಶಸ್ಸನ್ನು ಪಡೆಯುತ್ತೀರಿ. ಅವಿವಾಹಿತರ ವಿವಾಹದ ಮಾತುಕತೆ ಮುಂದುವರಿಯಲಿದೆ.
ಕಟಕ ರಾಶಿ: ವಾಹನ ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸಿ. ಕಾರ್ಯರಂಗದಲ್ಲಿ ಕೆಲವೊಂದು ಸಮಸ್ಯೆಗಳು ಕಂಡುಬಂದರೂ ಕಾರ್ಯಸಾಧನೆಯಾಗಲಿದೆ. ಆರ್ಥಿಕವಾಗಿ ಕೊಟ್ಟುಕೊಳ್ಳುವಿಕೆಯಲ್ಲಿ ಹೆಚ್ಚಿನ ಜಾಗ್ರತೆ ವಹಿಸಿ.
ಸಿಂಹ ರಾಶಿ: ಇಂದು, ಕಠಿಣ ಪರಿಶ್ರಮ ಮತ್ತು ಲಾಭ ಕಡಿಮೆ ಇರುತ್ತದೆ. ಕೆಲಸದಲ್ಲಿ ಅಡೆತಡೆಗಳು ಉಂಟಾಗುತ್ತವೆ. ಇಂದು ಹೊಸ ಒಪ್ಪಂದವು ಇದ್ದಕ್ಕಿದ್ದಂತೆ ಹಣದ ಪ್ರಯೋಜನವನ್ನು ನೀಡುತ್ತದೆ. ಮನೆಯಲ್ಲಿ ಹೆಂಡತಿ ಅಥವಾ ಮಗುವಿನ ಅನಿರೀಕ್ಷಿತ ಅನಾರೋಗ್ಯವು ಆತಂಕಕ್ಕೆ ಕಾರಣವಾಗಬಹುದು.
ಕನ್ಯಾ ರಾಶಿ: ವಿದ್ಯಾರ್ಥಿಗಳ ಪ್ರಯತ್ನಬಲಕ್ಕೆ ಉತ್ತಮ ಯಶಸ್ಸು ದೂರಕಲಿದೆ. ಗೃಹಬಳಕೆ ಸಾಮಾಗ್ರಿಗಾಗಿ ಧನವ್ಯಯವಾಗಲಿದೆ. ಮಿತ್ರವರ್ಗದವರಿಂದ ಶುಭ ಸಮಾಚಾರವಿರುತ್ತದೆ. ಆರೋಗ್ಯದಲ್ಲಿ ಏರುಪೇರಾದೀತು. ದಾಯಾದಿಗಳ ಕಲಹವಾಗಬಹುದು.
ತುಲಾ ರಾಶಿ: ಕೆಲಸದ ಸ್ಥಳದಲ್ಲಿ ನಿಮ್ಮ ತಾಳ್ಮೆ ಮತ್ತು ಮೃದು ನಡವಳಿಕೆಯಿಂದ ವಾತಾವರಣವನ್ನು ಹಗುರಗೊಳಿಸಲು ನಿಮಗೆ ಸಾಧ್ಯವಾಗುತ್ತದೆ. ನಿಮ್ಮ ಖ್ಯಾತಿ ಖಂಡಿತವಾಗಿಯೂ ಸಮಾಜದಲ್ಲಿ ಹೆಚ್ಚಾಗುತ್ತದೆ. ಎದುರಾಳಿಗಳನ್ನು ಸೋಲಿಸುವಿರಿ.
ವೃಶ್ಚಿಕ ರಾಶಿ: ಮಕ್ಕಳ ಬಗ್ಗೆ ಯೋಚಿಸುವಂತಾಗಬಹುದು. ಆರ್ಥಿಕವಾಗಿ ಹಂತಹಂತವಾಗಿ ಅಭಿವೃದ್ಧಿ ಕಂಡು ಬರಲಿದೆ. ಆಪ್ತಮಿತ್ರರೊಡನೆ ನಿಷ್ಠುರಕ್ಕೆ ಕಾರಣರಾಗದಂತೆ ಜಾಗ್ರತೆವಹಿಸಿ. ಸಣ್ಣಪುಟ್ಟ ಕಾರ್ಯಕ್ಕಾಗಿ ಧನವ್ಯಯವಿದೆ.
ಧನುಸ್ಸು ರಾಶಿ: ವ್ಯವಹಾರದಲ್ಲಿ ಲಾಭ ಯಶಸ್ಸನ್ನು ಸಾಧಿಸುವಿರಿ. ಸಾಮಾಜಿಕ ಜೀವನದಲ್ಲಿ ಉಂಟಾಗುವ ಅಡೆತಡೆಗಳು ಮತ್ತು ಕ್ಷೇತ್ರದಲ್ಲಿ ಬರುವ ಸಮಸ್ಯೆಗಳು ನಿವಾರಣೆಯಾಗುವುದು.
ಮಕರ ರಾಶಿ: ಮನೆ ರಿಪೇರಿ ಕೆಲಸಗಳಿಗಾಗಿ ಧನವ್ಯಯವಾಗಲಿದೆ. ವ್ಯವಹಾರದಲ್ಲಿ ಆರ್ಥಿಕವಾಗಿ ಲಾಭ ಕಂಡು ಬರಲಿದೆ. ಸಂಸಾರದಲ್ಲಿ ಸಂಬಂಧಿಗಳ ಸಹಕಾರದಿಂದ ಸಂತಸವಿದೆ. ವೈಯಕ್ತಿಕ ಆರೋಗ್ಯ ಆಗಾಗ ಏರುಪೇರಾಗಲಿದೆ.
ಕುಂಭ ರಾಶಿ: ನಿಮ್ಮ ಆದಾಯ ಹೆಚ್ಚಾಗುತ್ತದೆ. ಹಣವು ಪ್ರಯೋಜನ ಪಡೆಯುತ್ತದೆ ಮತ್ತು ನೀವು ಹೂಡಿಕೆ ಮಾಡಿದರೆ, ಖಂಡಿತವಾಗಿಯೂ ಲಾಭವನ್ನು ಪಡೆಯುತ್ತೀರಿ. ಸಂಗಾತಿಯ ಬೆಂಬಲ ಮತ್ತು ಸಾಂಗತ್ಯವನ್ನು ಪಡೆಯುವಿರಿ.
ಮಿನ ರಾಶಿ: ಇಂದು ಮಧ್ಯಮ ಫಲಪ್ರದ ದಿನವಾಗಿರುತ್ತದೆ. ಹೆಚ್ಚುವರಿ ಖರ್ಚು ಉಂಟಾಗಬಹುದು. ಕೆಲವು ಕಾರಣಗಳಿಂದಾಗಿ ಅನಗತ್ಯ ವೆಚ್ಚಗಳು ಇರಬಹುದು. ಆರ್ಥಿಕ ಸಮತೋಲನವನ್ನು ಕಾಪಾಡಿಕೊಳ್ಳಿ. ಅನಗತ್ಯ ಪ್ರಯಾಣವನ್ನು ತಪ್ಪಿಸುವುದು ಉತ್ತಮ.
ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.