ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.ಮೇಷ ರಾಶಿ: ವೃತ್ತಿರಂಗದಲ್ಲಿ ಎಚ್ಚರದ ನಡೆ ನಿಮ್ಮದಾಗಿರಲಿ. ಹಿತಶತ್ರುಗಳು ನಿಮ್ಮನ್ನು ಗಮನಿಸಬಹುದು. ನೀವು ಕೈಗೊಂಡ ಕಾರ್ಯದಲ್ಲಿ ವಿಳಂಬ ಕಂಡುಬಂದರೂ ಕೆಲಸ ಆಗುವುದು.
ವೃಷಭರಾಶಿ: ಸಾಲಕ್ಕಾಗಿ ಪರದಾಟ ಇರುತ್ತದೆ. ದಾಂಪತ್ಯ ಜೀವನವು ಸಂತೋಷಕರವಾಗಿರುತ್ತದೆ. ಇಂದು, ದೂರದ ಪ್ರಯಾಣವೂ ಇರಬಹುದು. ವಿದ್ಯಾರ್ಥಿಗಳು ಮಾನಸಿಕ ಬೌದ್ಧಿಕ ಹೊರೆ ತೊಡೆದುಹಾಕುತ್ತಾರೆ.
.ಮಿಥುನ ರಾಶಿ: ಸಹೋದ್ಯೋಗಿ ಹಾಗೂ ಗುರುಹಿರಿಯರೊಡನೆ ಮುಕ್ತವಾಗಿ ಮಾತುಕತೆ ನಡೆಸಿ. ಎಲ್ಲರನ್ನೂ ಆಕರ್ಷಿಸುವ ವ್ಯಕ್ತಿತ್ವ ನಿಮ್ಮದಾಗಿರುತ್ತದೆ. ನೇರ ಹಾಗೂ ದಿಟ್ಟ ನಡೆ ಎಲ್ಲರನ್ನೂ ಮೆಚ್ಚಿಸಲಿದೆ. ಸಂಗಾತಿಯ ಅನಾರೋಗ್ಯದಿಂದಾಗಿ ಹೆಚ್ಚಿನ ಖರ್ಚುಗಳನ್ನು ಅನುಭವಿಸಬಹುದು.
ಕಟಕ ರಾಶಿ: ಬೆನ್ನು ಹಾಗೂ ಸೊಂಟ ನೋವಿನಿಂದ ಕಿರಿಕಿರಿ ಎನಿಸಲಿದೆ. ವೈದ್ಯರ ತಪಾಸಣೆಯ ಅಗತ್ಯ ವಿರುತ್ತದೆ. ಅನಿರೀಕ್ಷಿತವಾಗಿ ಮಿತ್ರರ ಭೇಟಿ ಇರಲಿದೆ. ಸಹಾಯಹಸ್ತ ಸಿಗಲಿದೆ. ಪುತ್ರನ ಭೇಟಿಯಿಂದ ಸಂತಸವಾಗಲಿದೆ.
ಸಿಂಹ ರಾಶಿ: ವಾಣಿಜ್ಯ ಕ್ಷೇತ್ರದಲ್ಲಿ ಮನಸ್ಸಿನ ಅನುಕೂಲಕರ ಪ್ರಯೋಜನಗಳಿಂದಾಗಿ ಸಂತೋಷವನ್ನು ಅನುಭವಿಸುವಿರಿ. ಇಂದು, ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಬಲವಾಗಿರುತ್ತದೆ. ವ್ಯವಹಾರದಲ್ಲಿ ಬದಲಾವಣೆಗಳನ್ನು ಯೋಜಿಸುತ್ತಿದ್ದರೆ, ನಿಮಗೆ ಲಾಭವಾಗುತ್ತದೆ.
ಕನ್ಯಾ ರಾಶಿ: ಕೇವಲ ದೈವವನ್ನು ದೂರುವುದು ಬೇಡ. ಪ್ರಾರಬ್ಧಕರ್ಮ ಬೆಂಬಿಡದೆ ಬರುವುದು. ಆದರೂ ಧೈರ್ಯದಿಂದ ಮುಂದುವರಿಯಿರಿ. ಗೃಹ ಸಾಲ ಪಾವತಿಗಾಗಿ ಸ್ವಲ್ಪ ಪರದಾಟ ಕಂಡುಬರಲಿದೆ. ಶುಭವಿದೆ.
ತುಲಾ ರಾಶಿ: ಲೌಕಿಕ ಆನಂದವು ಹೆಚ್ಚಾಗುತ್ತವೆ. ಅಧೀನ ಉದ್ಯೋಗಿ ಅಥವಾ ಸಂಬಂಧಿಕರಿಂದ ಒತ್ತಡ ಹೆಚ್ಚಾಗಬಹುದು. ಹಣದ ವಹಿವಾಟಿನಲ್ಲಿ ಜಾಗರೂಕರಾಗಿರಿ.
ವೃಶ್ಚಿಕ ರಾಶಿ: ನಿಮ್ಮ ಸಹೋದ್ಯೋಗಿಗಳಿಂದ ಕಿರುಕುಳ ಹಾಗೂ ತಾತ್ಸಾರ ಕಂಡು ಬಂದು ಮನಸ್ಸು ರೋಸಿ ಹೋಗಲಿದೆ. ದೈವಾನುಗ್ರಹ ನಿಮ್ಮ ಮೇಲಿರುವುದರಿಂದ ಆರ್ಥಿಕವಾಗಿ ಉತ್ತಮ ವಿರುತ್ತದೆ. ಖರ್ಚಿನಲ್ಲಿ ನಿಗಾವಹಿಸಿ.
ಧನುಸ್ಸು ರಾಶಿ: ಕುಟುಂಬದಲ್ಲಿ ಮನೆ ಸದಸ್ಯರ ಅನಾರೋಗ್ಯದಿಂದ ತುಂಬಾ ಬಳಲುವಿರಿ. ಆದರೆ ಚಿಂತೆ ಮಾಡಿ ಪ್ರಯೋಜವಿಲ್ಲ. ನಿಮ್ಮ ಕರ್ತವ್ಯವನ್ನು ಮನಪೂರ್ವಕವಾಗಿ ಮಾಡಿ. ದೈವ ಬೆಂಬಲ ಸಿಗುವುದು. ಹೊಸ ಆದಾಯದ ಮೂಲಗಳು ಕಂಡುಬರುವುದು.
ಮಕರ ರಾಶಿ: ಕ್ಷೇತ್ರದಲ್ಲಿ ನಿಮ್ಮ ಮಾತು ನಿಮಗೆ ವಿಶೇಷ ಗೌರವವನ್ನು ನೀಡುತ್ತದೆ. ಆದರೆ ಇಂದು ಅತಿಯಾದ ವಾಹನ ಚಾಲನೆಯಿಂದಾಗಿ, ಹವಾಮಾನದಿಂದಾಗಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು, ಜಾಗರೂಕರಾಗಿರಿ.
ಕುಂಭ ರಾಶಿ: ನಿಮ್ಮ ಜೀವನದಲ್ಲಿ ತಾಳ್ಮೆ ಸಹನೆಯ ಅಗತ್ಯವಿದೆ. ಸಿಟ್ಟು ಸಿಡುಕನ್ನು ಸ್ವಲ್ಪ ಬಿಟ್ಟು ಬಿಟ್ಟರೆ ನಿಮ್ಮ ಹಾದಿ ಸುಗಮವಾಗಲಿದೆ. ಹಿರಿಯರೊಂದಿಗೆ ಮನಬಿಚ್ಚಿ ಮಾತನಾಡಿದರೆ ಒಳಿತು. ಸಾಫಲ್ಯ ಕಾಣುವಿರಿ.
ಮಿನ ರಾಶಿ:ಪ್ರಯತ್ನ ಬಲದಿಂದ ಮುಂದುವರಿಯುವ ನಿಮಗೆ ಜಯ ಲಭಿಸಲಿದೆ. ಮನಸ್ಸನ್ನು ನಿಯಂತ್ರಣದಲ್ಲಿಟ್ಟು ಕೊಳ್ಳಿ. ನಿಮ್ಮ ಛಲವು ನಿಮ್ಮನ್ನು ಮುಂದಕ್ಕೆ ಕರೆದೊಯ್ಯಲಿದೆ. ಕಿರು ಸಂಚಾರವಿದೆ. ರಾಜಕೀಯ ಕ್ಷೇತ್ರದಲ್ಲಿ ಅಕಾಲಿಕ ಯಶಸ್ಸನ್ನು ಸಾಧಿಸುವ ಅವಕಾಶವಿದೆ.
ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.