ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.ಮೇಷ ರಾಶಿ: ಮಾತಿನಲ್ಲಿ ಚತುರತೆ ಇರುವ ನೀವು ಎಲ್ಲರನ್ನು ಮೋಡಿಮಾಡುವಿರಿ. ಮನೆಯಲ್ಲಿ ಪತ್ನಿಯೊಂದಿಗೆ ಮುನಿಸು ಹಾಗೂ ಕೋಪತಾಪಗಳಿರಲಿವೆ. ವೃತ್ತಿರಂಗದಲ್ಲಿ ಬಡ್ತಿಯ ಯೋಗವಿದೆ. ವ್ಯಾಪಾರಿಗಳಿಗೆ ಉತ್ತಮ ಲಾಭವಿದೆ. ಕುಟುಂಬದ ವಿವಾದವನ್ನು ಕೊನೆಗೊಳಿಸಲು ಹಿರಿಯರು ಮುಂದಾಗುತ್ತಾರೆ.
ವೃಷಭರಾಶಿ: ಇಂದು ನೀವು ನಿಮ್ಮ ಸೃಜನಶೀಲ ಚಟುವಟಿಕೆಗಳಿಗೆ ಗಮನ ಕೊಡುತ್ತೀರಿ. ಯಾವುದೇ ಕಾರ್ಯವನ್ನು ತೆಗೆದುಕೊಳ್ಳುವ ಮೊದಲು, ಅದರ ಒಳಿತು ಮತ್ತು ಕೆಡುಕು ಎರಡೂ ಬದಿಗಳನ್ನು ನೋಡಿ.
.ಮಿಥುನ ರಾಶಿ: ನಿರ್ಮಲ ಮನಸ್ಸನ್ನು ಇಟ್ಟುಕೊಳ್ಳಿ. ಮನಸ್ಸನ್ನು ಏರುಪೇರು ಮಾಡಲು ಬಿಡಬೇಡಿ. ಉದ್ವೇಗಕ್ಕೆ ಆಸ್ಪದ ಕೊಡಬೇಡಿ. ನ್ಯಾಯಾಲಯದ ಕಾರ್ಯದಲ್ಲಿಏರುಪೇರು ಕಂಡುಬರಲಿದೆ. ಈ ದಿನವು ವಿದ್ಯಾರ್ಥಿಗಳಿಗೆ ಶುಭವಾಗಲಿದೆ,
ಕಟಕ ರಾಶಿ: ಭವಿಷ್ಯದ ಯೋಜನೆಗಳನ್ನು ಕುಟುಂಬದೊಂದಿಗೆ ಚರ್ಚಿಸುವಿರಿ. ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ, ಇದರಿಂದಾಗಿ ಮನೆಯ ವಾತಾವರಣವು ಸಂತೋಷವಾಗಿರುತ್ತದೆ. ಪ್ರೀತಿಯ ಜೀವನಕ್ಕಾಗಿ ಸಮಯವನ್ನು ನೀಡಲು ಸಾಧ್ಯವಾಗುತ್ತದೆ.
ಸಿಂಹ ರಾಶಿ: ತಿರುಗಾಟದಿಂದ ವ್ಯಾಪಾರ ಮಾಡುವವರಿಗೆ ಜಾಗ್ರತೆಯ ಅಗತ್ಯವಿದೆ. ಆರ್ಥಿಕ ದೃಷ್ಟಿಯಿಂದ ಹಿಂಬಡ್ತಿ ಇರುವುದು. ಆದರೂ ಧೈರ್ಯದಿಂದ ಮುನ್ನಡೆಯುವುದು ಮುಖ್ಯ. ದೈಹಿಕವಾಗಿ ಮತ್ತು ಮಾನಸಿಕವಾಗಿ ತೊಂದರೆಯಾದರೂ, ನೀವು ಪ್ರತಿ ಕಾರ್ಯದಲ್ಲೂ ನಿಮ್ಮ ನೂರು ಪ್ರತಿಶತ ಪ್ರಯತ್ನವನ್ನು ನೀಡುತ್ತೀರಿ.
ಕನ್ಯಾ ರಾಶಿ: ಶೈಕ್ಷಣಿಕ ಕಾರ್ಯರಂಗದಲ್ಲಿ ಅಭಿವೃದ್ಧಿಯ ದಿನಗಳಿವು. ನಿಮ್ಮ ಕಾರ್ಯವೈಖರಿಗೆ ಹಾಗೂ ತಾಳ್ಮೆ ಸಮಾಧಾನಕ್ಕೆ ಒಳ್ಳೆಯ ಪ್ರಶಂಸೆ ಕಂಡು ಬರಲಿದೆ. ಮುನ್ನಡೆಯಿರಿ. ವೈದ್ಯರಿಗೆ ಉತ್ತಮ ಸಮಯ. ಸ್ನೇಹಿತರ ಸಹಾಯದಿಂದ ವ್ಯವಹಾರದಲ್ಲಿ ಹೂಡಿಕೆ ಮಾಡಿ.
ತುಲಾ ರಾಶಿ: ಸುಧಾರಣೆಯ ದಿನಗಳಿವು. ಪತ್ನಿಯ ಉದ್ಯೋಗದಲ್ಲಿ ಬಡ್ತಿ ಇರುತ್ತದೆ. ಮಕ್ಕಳಿಂದ ಸುಖ ಸಂತೋಷ ಸಮಾಧಾನವಿರುತ್ತದೆ. ವೃತ್ತಿರಂಗದಲ್ಲಿ ಸ್ವಲ್ಪ ತಿಕ್ಕಾಟದಿಂದ ಬೇಸರವಾಗಲಿದೆ. ಮನೆಗೆ ಸಂಬಂಧಿಕರ ಆಗಮನವಾಗಲಿದೆ.
ವೃಶ್ಚಿಕ ರಾಶಿ: ಆರ್ಥಿಕ ರಂಗದಲ್ಲಿ ಅಭಿವೃದ್ಧಿ ಇರುತ್ತದೆ. ಹಾಗೆಂದುಕೊಂಡು ದುರ್ವ್ಯಸನದಿಂದ ಹಣವನ್ನು ಕಳೆದುಕೊಳ್ಳಬೇಡಿ. ಹಳೆಯ ಗೆಳೆಯರ ಭೇಟಿಯಾಗಲಿದ್ದು ಅವರೊಂದಿಗೆ ಕಾಲ ಕಳೆಯುವಿರಿ.
ಧನುಸ್ಸು ರಾಶಿ: ವೈಯಕ್ತಿಕ ಸಂಬಂಧಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಬಿಡಬೇಡಿ, ಅದು ನಿಮಗೆ ತೊಂದರೆ ನೀಡುತ್ತದೆ. ಮನೆ ಮತ್ತು ಕುಟುಂಬದ ಸಮಸ್ಯೆಗಳಿಗೆ ಗಮನ ಕೊಡಿ, ಇದರಿಂದ ನಿಮಗೆ ಮಾನಸಿಕ ಶಾಂತಿ ಸಿಗುತ್ತದೆ.
ಮಕರ ರಾಶಿ: ಹೊಸ ಬಗೆಯ ವಾತಾವರಣವು ಮನಸ್ಸಿಗೆ ಮುದ ನೀಡಲಿದೆ. ಶ್ರೀ ದೇವತಾನುಗ್ರಹವು ಉತ್ತಮವಿರುವುದರಿಂದ ಮುನ್ನಡಿ ಇಡುವುದು ನಿಮ್ಮ ಆದ್ಯ ಕರ್ತವ್ಯವಾಗಿದೆ. ಕಿರು ಸಂಚಾರವಿದೆ.
ಕುಂಭ ರಾಶಿ: ಆಕಸ್ಮಿಕವಾಗಿ ಪ್ರಯಾಣದ ಸಂದರ್ಭ ಒದಗಿ ಬರಬಹುದು. ಆದರೆ ನಿಮಗೆ ಅದರಿಂದ ಸಂತಸ ಸಿಗಲಿದೆ. ಕಾರ್ಯಸಾಧನೆಯಾಗಲಿದೆ. ಗೃಹ ಅಥವಾ ವಾಹನ ಖರೀದಿ ಯೋಗವಿದೆ. ದಿನಾಂತ್ಯ ಶುಭ ಸಮಾಚಾರ ಕೇಳುವಿರಿ.
ಮಿನ ರಾಶಿ: ಆರೋಗ್ಯ ಮತ್ತು ಆರ್ಥಿಕ ವಿಷಯಗಳನ್ನು ನಿರ್ಲಕ್ಷಿಸಬೇಡಿ. ನೀವು ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಲು ಬಯಸಿದರೆ, ಈ ಸಮಯವು ಶುಭವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಹೊಸದನ್ನು ಕಲಿಯಲು ಅವಕಾಶ ಸಿಗುತ್ತದೆ.
ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.