ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.ಮೇಷ ರಾಶಿ: ನಿಮ್ಮಿಚ್ಛೆಯಂತೆ ಕೆಲಸ ಕಾರ್ಯಗಳು ಯಶಸ್ಸಾಗಲಿವೆ. ಹಾಗೆಯೇ ಸಂಸಾರದ ಸುಖ ಹಂತ ಹಂತವಾಗಿ ವೃದ್ಧಿಸಲಿದೆ. ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗುತ್ತದೆ. ಹಣ್ಣು, ತರಕಾರಿ ವ್ಯಾಪಾರಿಗಳಿಗೆ ಒಳ್ಳೆಯ ದಿನ .ವ್ಯವಹಾರದಲ್ಲಿನ ಪ್ರಗತಿಯ ಬಗ್ಗೆ ನೀವು ತುಂಬಾ ಸಂತೋಷವಾಗಿರುತ್ತೀರಿ.
ವೃಷಭರಾಶಿ: ವೃತ್ತಿಯಲ್ಲಿ ನಿಮಗೆ ಪ್ರತಿಕೂಲವಾದ ವಾತಾವರಣ ನಿರ್ಮಾಣವಾಗಲಿದೆ. ಅನಿರೀಕ್ಷಿತವಾಗಿ ಆತ್ಮೀಯ ಸ್ನೇಹಿತರೊಬ್ಬರನ್ನು ಭೇಟಿಯಾಗಲಿದ್ದೀರಿ. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಹೆಚ್ಚಿನ ಗಮನ ಹರಿಸುವುದು ಅಗತ್ಯ.
.ಮಿಥುನ ರಾಶಿ: ವಿದ್ಯಾರ್ಥಿಗಳು ಅಧ್ಯಯನಕ್ಕೆ ಗರಿಷ್ಠ ಸಮಯವನ್ನು ಮೀಸಲಿಡುವುದು ಅಗತ್ಯ. ಈ ದಿನ ಕೆಲವರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಮಯವನ್ನು ಕಳೆಯಬಹುದು.
ಕಟಕ ರಾಶಿ: ಆಗಾಗ ಸಮಸ್ಯೆಗಳು ಕಾಡಲಿವೆ. ಸಹೋದ್ಯೋಗಿಗಳ ಜತೆಗಿನ ನಿಮ್ಮ ಸಂಬಂಧವು ಉತ್ತಮಗೊಳ್ಳಲಿದೆ. ಅನಿರೀಕ್ಷಿತವಾಗಿ ಆರ್ಥಿಕ ನೆರವು ನಿಮಗೆ ಸಿಗಲಿದೆ. ನಿಮ್ಮ ಕುಟುಂಬ ಜೀವನವೂ ಸಂತೋಷವಾಗಿರುತ್ತದೆ. ರಾಜಕೀಯ ಬೆಂಬಲವೂ ಇರುತ್ತದೆ. ಮಾತಿನಲ್ಲಿ ಸಂಯಮವಿರಲಿ.
ಸಿಂಹ ರಾಶಿ: ನಿಮ್ಮ ಪ್ರಾಮಾಣಿಕತೆಗೆ ವೃತ್ತಿಯಲ್ಲಿ ಉತ್ತಮ ಫಲ ದೊರಕಲಿದೆ. ಆರ್ಥಿಕವಾಗಿ ಮಾತ್ರ ಎಚ್ಚರಿಕೆಯಿಂದ ವರ್ತಿಸಬೇಕಾಗಬಹುದು. ಆಗಾಗ ಆರ್ಥಿಕ ಒತ್ತಡಗಳು ಕಂಡುಬಂದರೂ ಅನಿರೀಕ್ಷಿತ ರೂಪದಲ್ಲಿ ಕಾರ್ಯ ಸಾಧನೆಯಾಗಲಿದೆ.
ಕನ್ಯಾ ರಾಶಿ: ಇಂದು ನೀವು ಯಾವುದಾದರೂ ಉಡುಗೊರೆ ಅಥವಾ ಗೌರವದ ಲಾಭವನ್ನು ಪಡೆಯುತ್ತೀರಿ. ಉದ್ಯೋಗದ ದಿಕ್ಕಿನಲ್ಲಿಯೂ ನೀವು ಯಶಸ್ಸನ್ನು ಪಡೆಯುತ್ತೀರಿ. ಸಂಜೆಯಿಂದ ರಾತ್ರಿಯವರೆಗೆ ಅನಗತ್ಯ ಪ್ರಯಾಣದ ಸಾಧ್ಯತೆ ಇದೆ.
ತುಲಾ ರಾಶಿ: ಕುಟುಂಬ ನೆಮ್ಮದಿ ಸಿಗಲಿದೆ. ವೃತ್ತಿಯಲ್ಲಿ ನಿಮಗೆ ಪ್ರತಿಕೂಲವಾದ ಬೆಳವಣಿಗೆಯಿಂದ ಸಣ್ಣ ಸಣ್ಣ ವಿಷಯಕ್ಕೂ ತಲೆ ಕೆಡಿಸಿಕೊಳ್ಳುವಿರಿ. ಕೆಲವರ ಅಸಂತೋಷಕ್ಕೆ ಇದು ಕಾರಣವಾಗಬಹುದು. ತಾಳ್ಮೆ ಇರಲಿ.
ವೃಶ್ಚಿಕ ರಾಶಿ: ನಿಮ್ಮ ಉತ್ತಮ ಕೆಲಸದ ಶೈಲಿ ಮತ್ತು ಮೃದು ನಡವಳಿಕೆಯಿಂದ ನೀವು ಲಾಭ ಪಡೆಯುತ್ತೀರಿ. ನೀವು ಇತರರಿಂದ ಬೆಂಬಲವನ್ನು ಪಡೆಯಲು ಸಾಧ್ಯವಾಗುತ್ತದೆ. ಹತ್ತಿರ ಮತ್ತು ದೂರದ ಪ್ರಯಾಣದ ಯೋಗವೂ ಇದೆ.
ಧನುಸ್ಸು ರಾಶಿ: ಆಗಾಗ ಖರ್ಚುವೆಚ್ಚಗಳು ಅಧಿಕವಾಗಲಿವೆ. ಅನಿರೀಕ್ಷಿತ ರೂಪದಲ್ಲಿ ಬರಬೇಕಾದ ಹಣ ಬರಲಿದೆ. ವೈವಾಹಿಕ ಸಂಬಂಧಗಳ ವಿಷಯದಲ್ಲಿ ಮುಂದುವರಿಯುವುದು ಅಗತ್ಯವಿದೆ. ಹಿರಿಯರ ಆರೋಗ್ಯದ ಬಗ್ಗೆ ಗಮನವಿರಲಿ.
ಮಕರ ರಾಶಿ: ಇಂದು ನೀವು ಯಾವುದೇ ಶುಭ ಅಥವಾ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ನಿರತರಾಗಿರುತ್ತೀರಿ. ತಂದೆ ಮತ್ತು ಉನ್ನತ ಅಧಿಕಾರಿಗಳಿಂದ ಮೆಚ್ಚುಗೆಯನ್ನು ಸ್ವೀಕರಿಸುವಿರಿ.
ಕುಂಭ ರಾಶಿ: ಆರ್ಥಿಕವಾಗಿ ನಿಮಗೆ ಪ್ರತಿಕೂಲವಾದ ಬೆಳವಣಿಗೆ ಬೇಸರ ತರಬಹುದು. ನಿವೇಶನಕ್ಕಾಗಿ ಖರ್ಚು ಬರಲಿದೆ. ಕುಟುಂಬದ ಸದಸ್ಯರ ಕುರಿತು ಹೆಚ್ಚಿನ ಜಾಗ್ರತೆ ವಹಿಸಿ. ಅನಿರೀಕ್ಷಿತವಾಗಿ ಖರ್ಚು ಬರಬಹುದು.
ಮಿನ ರಾಶಿ: ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿಆಗಾಗ ನಿರುತ್ಸಾಹ ಕಾಡಲಿದೆ. ರಾಜಕೀಯದಲ್ಲಿ ಹೆಚ್ಚಿನ ಜಾಗ್ರತೆ ವಹಿಸಿ. ಸಂಸಾರದಲ್ಲಿ ಹೆಚ್ಚು ಭಾವುಕರಾಗಿ ವರ್ತಿಸಲಿದ್ದೀರಿ. ಜೀವನದಲ್ಲಿಏರುಪೇರಾಗಬಹುದು. ಇಂದು ನಿಮ್ಮ ಶಕ್ತಿಯ ಹೆಚ್ಚಳವು ಶತ್ರುಗಳ ಸ್ಥೈರ್ಯವನ್ನು ಕಡಿಮೆ ಮಾಡುತ್ತದೆ.
ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.