ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.ಮೇಷ ರಾಶಿ: ಇತರರ ನೆರವು ಕೇಳುವುದು ಅನಿವಾರ್ಯ ಎಂಬ ಸ್ಥಿತಿ ಏರ್ಪಡಬಹುದು. ಏಕಾಏಕಿ ಸಿಟ್ಟು ಜಾಸ್ತಿ ಆಗಲಿದೆ. ನಿಮಗೆ ಸಂಬಂಧ ಪಡದ ವಿಚಾರದಲ್ಲಿ ಅನಗತ್ಯವಾಗಿ ತಲೆ ಹಾಕಿಕೊಂಡು ಹೋಗಬೇಡಿ. ಅಂಗಡಿ ಏನಾದರೂ ನಡೆಸುತ್ತಿದ್ದಲ್ಲಿ ಬೆಲೆ ಬಾಳುವ ವಸ್ತುಗಳ ಕಡೆಗೆ ಹೆಚ್ಚಿನ ಲಕ್ಷ್ಯ ವಹಿಸಿ.
ವೃಷಭರಾಶಿ: ಎಲ್ಲವನ್ನೂ ಒಪ್ಪಿಸಿಕೊಂಡು, ಮುಂದಕ್ಕೆ ಸಾಗಬೇಕು ಎಂಬ ನಿಮ್ಮ ಪ್ರಯತ್ನಕ್ಕೆ ಕುಟುಂಬದಲ್ಲಿ ಮೆಚ್ಚುಗೆ ಕೇಳಿಬರುತ್ತದೆ. ಸಂಗಾತಿ ಜತೆಗೆ ಉತ್ತಮ ಸಮಯ ಕಳೆಯಲಿದ್ದೀರಿ. ಪ್ರೇಮಿಗಳಿಗೆ ಸುಮಧುರ ಕ್ಷಣಗಳನ್ನು ಒಟ್ಟಾಗಿ ಕಳೆಯುವ ಯೋಗ ಇದೆ. ಧ್ಯಾನ ಮಾಡಿದಲ್ಲಿ ನೆಮ್ಮದಿ ದೊರೆಯಲಿದೆ.
.ಮಿಥುನ ರಾಶಿ: ಪಟ್ಟು ಹಿಡಿದು ಹಲವು ಕೆಲಸಗಳನ್ನು ಮಾಡಿ, ಮುಗಿಸುವುದಕ್ಕೆ ಪ್ರಯತ್ನ ಪಡಲಿದ್ದೀರಿ. ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಜವಾಬ್ದಾರಿಗಳನ್ನು ಹೊರಬೇಕಾಗುತ್ತದೆ ಎಂಬ ಸೂಚನೆ ದೊರೆಯಲಿದೆ. ದೇವತಾರಾಧನೆಯಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ.
ಕಟಕ ರಾಶಿ: ದಿಢೀರ್ ಬದಲಾವಣೆಗಳಿಗೆ ಹೊಂದಿಕೊಂಡು ಹೋಗುವುದು ಅನಿವಾರ್ಯ ಆಗಲಿದೆ. ಕೊನೆ ಕ್ಷಣದಲ್ಲಿ ಪ್ರಮುಖ ಬದಲಾವಣೆಗಳು ಆಗಿ, ಕೆಲಸದಲ್ಲಿ ಒತ್ತಡ ಹೆಚ್ಚಾಗಲಿದೆ. ಶುಭ ಸುದ್ದಿಯನ್ನು ಕೇಳುವ ಯೋಗ ಇದೆ. ಮಿತ್ರರ ಭೇಟಿಯಾಗಿ, ಪ್ರಮುಖ ವಿಚಾರಗಳನ್ನು ಚರ್ಚೆ ಮಾಡಲಿದ್ದೀರಿ.
ಸಿಂಹ ರಾಶಿ: ನಿಮ್ಮ ತೀರ್ಮಾನಗಳು ಸರಿ ಎಂದು ಸಾಬೀತಾಗುತ್ತದೆ. ರುಚಿಕಟ್ಟಾದ ಊಟ- ತಿಂಡಿ ಮಾಡುವ ಯೋಗ ಇದೆ. ವಾಹನ ಖರೀದಿಗಾಗಿ ಹಣವನ್ನು ಮೀಸಲಿಡಲಿದ್ದೀರಿ. ಆದರೆ ಪದೇ ಪದೇ ನಿರ್ಧಾರಗಳನ್ನು ಬದಲಿಸಬೇಡಿ. ಯಾರ ಮೇಲೂ ದ್ವೇಷ ಸಾಧನೆ ಮಾಡುವುದು ನಿಮಗೆ ಮಾನಸಿಕ ನೆಮ್ಮದಿ ಹಾಳು ಮಾಡುತ್ತದೆ.
ಕನ್ಯಾ ರಾಶಿ: ಸೋದರ- ಸೋದರಿಯರನ್ನು ಸಂತುಷ್ಟವಾಗಿ ಇರಿಸುವ ಸಲುವಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ. ಕಣ್ಣು- ಹಲ್ಲಿನ ಬೇನೆ ನಿಮ್ಮನ್ನು ಕಾಡಬಹುದು. ಹಾಗೊಂದು ವೇಳೆ ನೋವು ಕಾಣಿಸಿಕೊಂಡಲ್ಲಿ ಕಡ್ಡಾಯವಾಗಿ ವೈದ್ಯರನ್ನು ಭೇಟಿ ಮಾಡಿ. ಔಷಧೋಪಚಾರ ತೆಗೆದುಕೊಳ್ಳುವಾಗ ಸರಿಯಾಗಿ ಪರಿಶೀಲನೆ ಮಾಡಿ.
ತುಲಾ ರಾಶಿ: ಮಾತಿನ ಮೇಲೆ ನಿಗಾ ಇರಲಿ. ಇತರರ ಮಾತನ್ನು ಕೇಳಿಕೊಂಡು ಆಪ್ತರ ಮೇಲೆ ಅನುಮಾನ ಪಟ್ಟಲ್ಲಿ ನಂತರ ದುಃಖ ಪಡಬೇಕಾಗುತ್ತದೆ. ನಿಮ್ಮ ಒಡವೆ, ವಸ್ತು ಇತ್ಯಾದಿ ಬೆಲೆ ಬಾಳುವ ವಸ್ತುಗಳನ್ನು ಜೋಪಾನವಾಗಿ ನೋಡಿಕೊಳ್ಳಿ. ಭುಜದ ನೋವಿನ ಸಮಸ್ಯೆ ಕಾಡಬಹುದು. ಅಂಥ ಸಂದರ್ಭದಲ್ಲಿ ತಕ್ಷಣ ವೈದ್ಯರನ್ನು ಭೇಟಿಯಾಗಿ..
ವೃಶ್ಚಿಕ ರಾಶಿ: ಏನೇ ಮಾತನಾಡುವ ಮುನ್ನ ಅದರ ಫಲಿತಾಂಶ ಏನಾಗಲಿದೆ ಅಂತಲೂ ಆಲೋಚನೆ ಮಾಡಿ. ಹುಂಬತನದಲ್ಲಿ ಮುನ್ನುಗ್ಗಿದರೆ ಆ ನಂತರ ಚಿಂತೆ ಮಾಡುವಂತಾಗುತ್ತದೆ. ಹಿರಿಯರು, ಅನುಭವಿಗಳ ಮಾರ್ಗದರ್ಶನವನ್ನು ಪಡೆಯಿರಿ. ಅತಿ ಮುಖ್ಯ ಸಂಗತಿಗಳಾಗಿದ್ದಲ್ಲಿ ನೀವೇ ಸ್ವತಃ ಮಾಡಿ.
ಧನುಸ್ಸು ರಾಶಿ: ಇನ್ನೊಬ್ಬರ ಮೇಲಿನ ಹಠಕ್ಕೆ ಬಿದ್ದು, ಖರ್ಚು ವಿಪರೀತ ಮಾಡಿದರೆ ಸಾಲ ತೀರಿಸುವುದು ನಿಮಗೇ ಕಷ್ಟವಾಗಲಿದೆ. ನಿಮ್ಮ ಅಗತ್ಯಗಳನ್ನು ಇನ್ನೊಬ್ಬರು ನಿರ್ಧರಿಸುವಂತಾಗಬಾರದು. ಇಷ್ಟ ಆಗದ ವಿಷಯಗಳಿಗೆ ನೇರವಾಗಿ ಇಲ್ಲ ಎಂದುಬಿಡಿ. ಇಲ್ಲದಿದ್ದಲ್ಲಿ ದಾಕ್ಷಿಣ್ಯಕ್ಕೆ ಸಿಲುಕಿಕೊಂಡು, ನಂತರ ಬೇಸರ ಆಗುತ್ತದೆ.
ಮಕರ ರಾಶಿ: ಮನೆಗೆ ಬಂಧುಗಳ ಆಗಮನ ಇದೆ. ರುಚಿಕಟ್ಟಾದ ಊಟ- ತಿಂಡಿ ಸವಿಯಲಿದ್ದೀರಿ. ಸೈಟ್- ಮನೆ ಖರೀದಿ ಮಾಡಬೇಕು ಎಂದಿರುವವರಿಗೆ ಸೂಕ್ತ ಅವಕಾಶ ದೊರೆಯಲಿದೆ. ಮನೆಯಲ್ಲಿ ಮದುವೆ ವಿಚಾರವಾಗಿ ಸಣ್ಣ- ಪುಟ್ಟ ಮನಸ್ತಾಪ ಆಗುವ ಸಾಧ್ಯತೆ ಇದೆ. ಮಾತಿಗೆ ಮಾತು ಬೆಳೆಸದಂತೆ ನೋಡಿಕೊಳ್ಳಿ.
ಕುಂಭ ರಾಶಿ: ಈ ದಿನವಿಡೀ ವಿಶ್ರಾಂತಿ ಪಡೆಯಬೇಕು ಎಂದೆನಿಸುತ್ತದೆ. ಕಲೆ- ಚಿತ್ರರಂಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಅವಕಾಶಗಳು ದೊರೆಯಲಿವೆ. ತೂಕ ಹೆಚ್ಚಳದ ಸಮಸ್ಯೆ ಇರುವವರು ಆರೋಗ್ಯದ ಕಡೆಗೆ ನಿಗಾ ಜಾಸ್ತಿ ತೆಗೆದುಕೊಳ್ಳುತ್ತೀರಿ. ವೃತ್ತಿಪರರಿಗೆ ಕಿರು ಪ್ರವಾಸದ ಯೋಗ ಇದೆ.
ಮಿನ ರಾಶಿ: ಲ್ಯಾಪ್ ಟಾಪ್, ಗ್ಯಾಜೆಟ್ ಹೀಗೆ ಯಾವುದಾದರೂ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿ ಮಾಡುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಬಹಳ ಸಮಯದಿಂದ ಹುಡುಕುತ್ತಿದ್ದ ವ್ಯಕ್ತಿ, ವಿಷಯ ಅಥವಾ ಮಾಹಿತಿ ನಿಮಗೆ ದೊರೆಯುವ ಸನ್ನಿವೇಶ ಇದೆ. ನಿಮ್ಮ ಶ್ರಮವನ್ನು ಗುರುತಿಸಿ, ಮೆಚ್ಚುಗೆ ಮಾತುಗಳನ್ನು ಇತರರು ಆಡಲಿದ್ದಾರೆ.
ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ