ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.ಮೇಷ ರಾಶಿ: ಜೀವನದಲ್ಲಿಹಿರಿಯರನ್ನು ಸದಾ ಕಾಲವೂ ಗೌರವದಿಂದ ಕಾಣುವ ನಿಮಗೆ ವಿಶೇಷ ಪ್ರಶಂಸೆಯ ಯೋಗವಿದೆ. ನೀವು ಇತರರಂತೆ ಸುಳ್ಳು ಆಶ್ವಾಸನೆ ಕೊಡುವಂಥವರಲ್ಲ. ನೀವು ಆಸ್ತಿಯಿಂದ ಲಾಭ ಪಡೆಯುತ್ತೀರಿ.
ವೃಷಭರಾಶಿ: ಕಳೆದುಹೋದ ಹಣ ಅಥವಾ ಬರಬೇಕಾಗಿದ್ದ ಹಣ ಕೈಸೇರುತ್ತದೆ. ಹಿರಿಯರ ಮಾರ್ಗದರ್ಶನದಿಂದಾಗಿ ಯಾವುದೇ ಕಷ್ಟಕರವಾದ ಸಮಸ್ಯೆಯನ್ನು ಸಹ ಬಗೆ ಹರಿಸಲಾಗುತ್ತದೆ. ಆಂಜನೇಯ ಸ್ವಾಮಿಯನ್ನು ಪ್ರಾರ್ತಿಸಿ.
.ಮಿಥುನ ರಾಶಿ: ಜನಪ್ರಿಯತೆ, ಜನಬೆಂಬಲಗಳನ್ನು ಕ್ರೋಢೀಕರಿಸಿಕೊಳ್ಳಲು ರಾಜಕೀಯ ಕ್ಷೇತ್ರದವರಿಗೆ ಯೋಗ್ಯ ದಿನ. ಭಾವನಾತ್ಮಕ ತಲ್ಲಣಗಳನ್ನು ನಿಯಂತ್ರಣ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ತೊಂದರೆ ಎದುರಾಗುವುದು ನಿಶ್ಚಿತ.
ಕಟಕ ರಾಶಿ: ಸಮಯದ ಲಾಭವನ್ನು ಪಡೆದುಕೊಳ್ಳಿ. ಇದು ಶುಭ ಫಲಿತಾಂಶಗಳನ್ನು ನೀಡುತ್ತದೆ. ಇತರರ ಸಹಾಯದಿಂದ ನೀವು ಸ್ಥಗಿತಗೊಂಡ ಯಾವುದೇ ಕೆಲಸವನ್ನು ಪೂರ್ಣಗೊಳಿಸುತ್ತೀರಿ. ಗಣಪತಿಗೆ ಗರಿಕೆ ನೀಡಿ ಪ್ರಾರ್ಥಿಸಿ.
ಸಿಂಹ ರಾಶಿ: ದೂರದ ಬಂಧುವೊಬ್ಬರನ್ನು ಭೇಟಿಯಾಗಲು ಹಲವು ಕಾರಣಗಳು ಕೂಡಿ ಬರಬಹುದು. ವಿಭಿನ್ನ ಅನುಭವಗಳು ಎದುರಾಗಲಿವೆ. ವ್ಯಾಪಾರದಲ್ಲಿ ನಷ್ಟವಾಗುವುದು, ಹಿರಿಯರ ಸಲಹೆಯನ್ನು ಪಾಲಿಸಿ. ಮನೆ ದೇವರನ್ನು ಸ್ಮರಿಸಿ, ಶುಭವಾಗುವುದು,
ಕನ್ಯಾ ರಾಶಿ:ವಿವಾಹಾಪೇಕ್ಷಿ ಯೋಗ್ಯವಾದ ಸಂಗಾತಿಯ ಹುಡುಕಾಟದಲ್ಲಿದ್ದರೆ ಇಂದು ಸಿದ್ಧಿ ಪಡೆಯುವ ವಿಶೇಷ ಅವಕಾಶವಿದೆ. ವ್ಯರ್ಥ ಖರ್ಚು ಇರುತ್ತದೆ. ಕೆಲವರು ದೂರ ಅಥವಾ ಹತ್ತಿರದ ಸ್ಥಳಗಳಿಗೆ ಪ್ರಯಾಣಿಸಬೇಕಾಗಬಹುದು.
ತುಲಾ ರಾಶಿ: ಸಾಕು ಪ್ರಾಣಿಗಳು ಕಿರಿಕಿರಿ ಉಂಟುಮಾಡಬಹುದು. ಹೀಗಾಗಿ ಅವುಗಳಿಗೆ ಅನಗತ್ಯ ಸಲುಗೆ ನೀಡಬೇಡಿ. ವೃತ್ತಿಯಲ್ಲಿ ತುಸು ಏರುಪೇರು ಆಯಿತೆಂದು ಅನಿಸಿದರೂ ದಿನದ ಕೊನೆಯ ಹೊತ್ತಿಗೆ ಶುಭ ಸಮಾಚಾರವನ್ನು ಕೇಳುವಿರಿ.
ವೃಶ್ಚಿಕ ರಾಶಿ: ಇಂದು ಬಿಡುವಿಲ್ಲದ ದಿನವಾಗಿರುತ್ತದೆ, ಆದರೆ ಒತ್ತಡವನ್ನು ನಿವಾರಿಸುವ ಮೂಲಕ ನಿಮ್ಮ ಎಲ್ಲಾ ಕಾರ್ಯಗಳನ್ನು ನೀವು ಸಮರ್ಥವಾಗಿ ನಿಭಾಯಿಸುವಿರಿ. ಎಳ್ಳೆಣ್ಣೆ ದೀಪ ಬೆಳಗಿ.
ಧನುಸ್ಸು ರಾಶಿ: ಇಂದು, ಯಾರೊಂದಿಗೂ ವಿವಾದಕ್ಕೆ ಸಿಲುಕಿಕೊಳ್ಳದಿರುವುದು ಮತ್ತು ನಿಮ್ಮ ಕೆಲಸವನ್ನು ಪೂರ್ಣಗೊಳಿಸುವತ್ತ ಮುಂದುವರೆಯಿರಿ. ಸಂಜೆಯ ವೇಳೆಗೆ ಕೆಲವು ಒಳ್ಳೆಯ ಸುದ್ದಿ ಮನಸ್ಸಿಗೆ ತೃಪ್ತಿಯನ್ನು ನೀಡುತ್ತದೆ.
ಮಕರ ರಾಶಿ: ಕುಟುಂಬದ ಸದಸ್ಯರ ಬೆಂಬಲದೊಂದಿಗೆ ಧೈರ್ಯದಿಂದ ಮುನ್ನುಗ್ಗಿದರೆ ಕ್ರಿಯಾಶೀಲತೆ ನಿಮ್ಮ ಕೈ ಹಿಡಿಯಲಿದೆ. ಕಚೇರಿಯಲ್ಲಿ ವಿಶೇಷವಾದ ಸೌಲಭ್ಯಗಳಿಗೆ ಪಾತ್ರರಾಗಲಿದ್ದೀರಿ. ಮಿತ್ರರೊಂದಿಗೆ ಸಮಯ ಕಳೆಯುವಿರಿ.
ಕುಂಭ ರಾಶಿ: ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡಲು ನಿಮಗೆ ಅವಕಾಶ ಸಿಗುತ್ತದೆ. ಲೌಕಿಕ ಸುಖಗಳ ವಿಸ್ತರಣೆ ಮತ್ತು ಕುಟುಂಬದಲ್ಲಿ ಸಂತೋಷದಾಯಕ ಬದಲಾವಣೆಗಳು ಉಂಟಾಗುವುದು.
ಮಿನ ರಾಶಿ: ಇಂದಿನ ವ್ಯವಹಾರದ ಕಾರ್ಯಶೀಲತೆಯೇ ನಿಮ್ಮ ಪ್ರಮುಖ ಆದ್ಯತೆಯಾಗಿರಲಿ. ಸಂಬಂಧಿಕರೊಂದಿಗಿದ್ದ ಯಾವುದೇ ರೀತಿಯ ದ್ವೇಷವನ್ನು ತೆಗೆದುಹಾಕುವುದು ಮತ್ತು ಹಳೆಯ ಎಲ್ಲ ವಿಷಯಗಳನ್ನು ಮರೆತು ಮುಂದೆ ಸಾಗುವ ದಿನ.
ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.