Dina Bhavishyaಜ್ಯೋತಿಷ್ಯ ತರಗತಿಪರಿಹಾರಗಳು

ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಭಕ್ತಿಯಿಂದ ಪ್ರಾರ್ಥಿಸುತ್ತ 30-09-2020ರ ಮೈ ಆಚಾರ್ಯ ನಿತ್ಯ ಭವಿಷ್ಯ ತಿಳಿಯಿರಿ.

ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.
This image has an empty alt attribute; its file name is 1.Arise-Horoscope-1024x1019.png
ಮೇಷ ರಾಶಿ: ಜನಪ್ರಿಯತೆ, ಜನಬೆಂಬಲಗಳನ್ನು ಕ್ರೋಢೀಕರಿಸಿಕೊಳ್ಳಲು ರಾಜಕೀಯ ಕ್ಷೇತ್ರದವರಿಗೆ ಯೋಗ್ಯ ದಿನ. ಭಾವನಾತ್ಮಕ ತಲ್ಲಣಗಳನ್ನು ನಿಯಂತ್ರಣ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ತೊಂದರೆ ಎದುರಾಗುವುದು ನಿಶ್ಚಿತ. ಸಮಯದ ಲಾಭವನ್ನು ಪಡೆದುಕೊಳ್ಳಿ. ಇದು ಶುಭ ಫಲಿತಾಂಶಗಳನ್ನು ನೀಡುತ್ತದೆ.
This image has an empty alt attribute; its file name is 2.Taurus-Horoscope-1-1024x1020.png
ವೃಷಭ ರಾಶಿ: ಜೀವನದಲ್ಲಿಹಿರಿಯರನ್ನು ಸದಾ ಕಾಲವೂ ಗೌರವದಿಂದ ಕಾಣುವ ನಿಮಗೆ ವಿಶೇಷ ಪ್ರಶಂಸೆಯ ಯೋಗವಿದೆ. ನೀವು ಇತರರಂತೆ ಸುಳ್ಳು ಆಶ್ವಾಸನೆ ಕೊಡುವಂಥವರಲ್ಲ. ನೀವು ಆಸ್ತಿಯಿಂದ ಲಾಭ ಪಡೆಯುತ್ತೀರಿ. .This image has an empty alt attribute; its file name is 3.Gamini-Horoscope-1024x1019.png ಮಿಥುನ ರಾಶಿ: ಕಳೆದುಹೋದ ಹಣ ಅಥವಾ ಬರಬೇಕಾಗಿದ್ದ ಹಣ ಕೈಸೇರುತ್ತದೆ. ಹಿರಿಯರ ಮಾರ್ಗದರ್ಶನದಿಂದಾಗಿ ಯಾವುದೇ ಕಷ್ಟಕರವಾದ ಸಮಸ್ಯೆಯನ್ನು ಸಹ ಬಗೆ ಹರಿಸಲಾಗುತ್ತದೆ. ಇತರರ ಸಹಾಯದಿಂದ ನೀವು ಸ್ಥಗಿತಗೊಂಡ ಯಾವುದೇ ಕೆಲಸವನ್ನು ಪೂರ್ಣಗೊಳಿಸುತ್ತೀರಿ. This image has an empty alt attribute; its file name is 4.Cancer-Horoscope-1024x1020.png
ಕಟಕ ರಾಶಿ: ದೂರದ ಬಂಧುವೊಬ್ಬರನ್ನು ಭೇಟಿಯಾಗಲು ಹಲವು ಕಾರಣಗಳು ಕೂಡಿ ಬರಬಹುದು. ವಿಭಿನ್ನ ಅನುಭವಗಳು ಎದುರಾಗಲಿವೆ. ಸಮಾಜದಲ್ಲಿಸಕಾರಾತ್ಮಕವಾಗಿ ಗುರುತಿಸಿಕೊಂಡ ನೀವು ಅದರಿಂದಾಗಿಯೇ ಹೆಚ್ಚು ಹೆಚ್ಚು ಅರ್ಥಪೂರ್ಣತೆ ಪಡೆಯಲಿದ್ದೀರಿ.
This image has an empty alt attribute; its file name is 5-copy-1024x1019.png
ಸಿಂಹ ರಾಶಿ: ಉದ್ಯೋಗಸ್ಥರು ಮತ್ತು ಉದ್ಯಮಿಗಳಿಗೆ ಇಂದು ವಿಶೇಷ ದಿನವಾಗಿದೆ. ಕೆಲವರು ಹಳೆಯ ಹೂಡಿಕೆಯಿಂದ ಇಂದು ಲಾಭ ಪಡೆಯಬಹುದು. ಹೋಟೆಲ್‌, ಹೋಮ್‌ ಸ್ಟೇ, ಪ್ರವಾಸೋದ್ಯಮ ಇತ್ಯಾದಿ ಕ್ಷೇತ್ರಗಳಲ್ಲಿತೊಡಗಿರುವವರಿಗೆ ಲಾಭದಾಯಕ ದಿನವಾಗಿದೆ.
This image has an empty alt attribute; its file name is 6-copy-1024x1019.png
ಕನ್ಯಾ ರಾಶಿ: ವಿವಾಹಾಪೇಕ್ಷಿ ಯೋಗ್ಯವಾದ ಸಂಗಾತಿಯ ಹುಡುಕಾಟದಲ್ಲಿದ್ದರೆ ಇಂದು ಸಿದ್ಧಿ ಪಡೆಯುವ ವಿಶೇಷ ಅವಕಾಶವಿದೆ. ವ್ಯರ್ಥ ಖರ್ಚು ಇರುತ್ತದೆ. ಕೆಲವರು ದೂರ ಅಥವಾ ಹತ್ತಿರದ ಸ್ಥಳಗಳಿಗೆ ಪ್ರಯಾಣಿಸಬೇಕಾಗಬಹುದು. This image has an empty alt attribute; its file name is 7-copy-1024x1020.png ತುಲಾ ರಾಶಿ: ಸಾಕು ಪ್ರಾಣಿಗಳು ಕಿರಿಕಿರಿ ಉಂಟುಮಾಡಬಹುದು. ಹೀಗಾಗಿ ಅವುಗಳಿಗೆ ಅನಗತ್ಯ ಸಲುಗೆ ನೀಡಬೇಡಿ. ವೃತ್ತಿಯಲ್ಲಿ ತುಸು ಏರುಪೇರು ಆಯಿತೆಂದು ಅನಿಸಿದರೂ ದಿನದ ಕೊನೆಯ ಹೊತ್ತಿಗೆ ಶುಭ ಸಮಾಚಾರವನ್ನು ಕೇಳುವಿರಿ.ಇಂದು ಬಿಡುವಿಲ್ಲದ ದಿನವಾಗಿರುತ್ತದೆ,
This image has an empty alt attribute; its file name is 8-copy-1024x1020.png
ವೃಶ್ಚಿಕ ರಾಶಿ: ಒತ್ತಡವನ್ನು ನಿವಾರಿಸುವ ಮೂಲಕ ನಿಮ್ಮ ಎಲ್ಲಾ ಕಾರ್ಯಗಳನ್ನು ನೀವು ಸಮರ್ಥವಾಗಿ ನಿಭಾಯಿಸುವಿರಿ. ಇಂದು, ಯಾರೊಂದಿಗೂ ವಿವಾದಕ್ಕೆ ಸಿಲುಕಿಕೊಳ್ಳದಿರುವುದು ಮತ್ತು ನಿಮ್ಮ ಕೆಲಸವನ್ನು ಪೂರ್ಣಗೊಳಿಸುವತ್ತ This image has an empty alt attribute; its file name is 9-copy-1024x1019.png ಧನುಸ್ಸು ರಾಶಿ: ಕುಟುಂಬದ ಸದಸ್ಯರ ಬೆಂಬಲದೊಂದಿಗೆ ಧೈರ್ಯದಿಂದ ಮುನ್ನುಗ್ಗಿದರೆ ಕ್ರಿಯಾಶೀಲತೆ ನಿಮ್ಮ ಕೈ ಹಿಡಿಯಲಿದೆ. ಕಚೇರಿಯಲ್ಲಿ ವಿಶೇಷವಾದ ಸೌಲಭ್ಯಗಳಿಗೆ ಪಾತ್ರರಾಗಲಿದ್ದೀರಿ. ಮಿತ್ರರೊಂದಿಗೆ ಸಮಯ ಕಳೆಯುವಿರಿ.
This image has an empty alt attribute; its file name is 10-copy-1024x1020.png
ಮಕರ ರಾಶಿ: ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡಲು ನಿಮಗೆ ಅವಕಾಶ ಸಿಗುತ್ತದೆ. ಲೌಕಿಕ ಸುಖಗಳ ವಿಸ್ತರಣೆ ಮತ್ತು ಕುಟುಂಬದಲ್ಲಿ ಸಂತೋಷದಾಯಕ ಬದಲಾವಣೆಗಳು ಉಂಟಾಗುವುದು.
This image has an empty alt attribute; its file name is 11-copy-1024x1019.png
ಕುಂಭ ರಾಶಿ: ಮನಬಂದಂತೆ ಚಿನ್ನಾಭರಣಗಳನ್ನು ಖರೀದಿ ಮಾಡುವುದು ಒಳಿತನ್ನು ತರಲಾರದು. ಉಳಿತಾಯದಿಂದ ಒಳಿತಿದೆ. ನಂಬಿಕೆಗಳ ಪ್ರಶ್ನೆ ಈಗ ಪ್ರಮುಖವಲ್ಲ. ಇಂದಿನ ವ್ಯವಹಾರದ ಕಾರ್ಯಶೀಲತೆಯೇ ನಿಮ್ಮ ಪ್ರಮುಖ ಆದ್ಯತೆಯಾಗಿರಲಿ.
This image has an empty alt attribute; its file name is 12-copy-1024x1019.png
ಮಿನ ರಾಶಿ: ಪ್ರೀತಿಯ ವಿಚಾರಗಳು ನಿಮ್ಮನ್ನು ಯಶಸ್ಸಿನ ಕಡೆ ಕರೆದೊಯ್ಯಬಹುದು. ಬೌದ್ಧಿಕವಾದ ಸಾಮರ್ಥ್ಯವಿರಲಿ. ದೂರ ಪ್ರಯಾಣದ ಏರ್ಪಾಡು ಹಾಕಿಕೊಂಡಿದ್ದರೆ ಕೂಡಲೇ ಅದರ ಬಗೆಗಿನ ರೂಪುರೇಷಗಳನ್ನು ಸಿದ್ದಪಡಿಸಿಕೊಂಡರೆ ಒಳಿತು. ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.
Tags

Related Articles

Leave a Reply

Your email address will not be published. Required fields are marked *

Back to top button
Close
Close

Adblock Detected

Please Disable Ad Blockers to get access to the site